×
Ad

ವೇತನ ಪರಿಷ್ಕರಣೆಗೆ ಆಗ್ರಹ: ಎರಡನೆ ದಿನವೂ ಬ್ಯಾಂಕ್ ನೌಕರರ ಮುಷ್ಕರ

Update: 2018-05-31 22:09 IST

ಮಂಗಳೂರು, ಮೇ 31: ವೇತನ ಪರಿಷ್ಕರಣೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಯೂನಿಯನ್ ನೀಡಿದ್ದ ಕರೆಯಂತೆ ಬುಧವಾರ ಮುಷ್ಕರ ಆರಂಭಿಸಿದ್ದ ಬ್ಯಾಂಕ್ ನೌಕರರು ಗುರುವಾರವೂ ಮುಷ್ಕರ ನಡೆಸಿದ್ದಾರೆ.

ಹಾಗಾಗಿ ಕಳೆದ ಎರಡು ದಿನದಲ್ಲಿ ಎಲ್ಲಾ ಬ್ಯಾಂಕ್‌ಗಳಲ್ಲಿ ವ್ಯವಹಾರ ಸ್ಥಗಿತಗೊಂಡಿದ್ದು, ಗ್ರಾಹಕರು ತೀವ್ರ ತೊಂದರೆಗೊಳಗಾದರು. ಹೆಚ್ಚಿನ ಗ್ರಾಹಕರಿಗೆ ಈ ಬಗ್ಗೆ ಅರಿವಿಲ್ಲದ ಕಾರಣ ಬ್ಯಾಂಕ್‌ವರೆಗೆ ಆಗಮಿಸಿ ಮರಳುತ್ತಿದ್ದ ದೃಶ್ಯ ಗುರುವಾರವೂ ಕಂಡು ಬಂತು.

ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘಟನೆಯ ಒತ್ತಾಯಕ್ಕೆ ಸ್ಪಂದನೆ ಸಿಗದ ಕಾರಣ ಎರಡು ದಿನ ಮುಷ್ಕರಕ್ಕೆ ಕರೆ ನೀಡಿತ್ತು. ಅದರಂತೆ ಎರಡು ದಿನವೂ ಮುಷ್ಕರ ನಡೆಸಿರುವ ನೌಕರರು ಶುಕ್ರವಾರ ಕೆಲಸಕ್ಕೆ ಹಾಜರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News