ನೈರುತ್ಯ ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆ
ಮಂಗಳೂರು, ಮೇ 31: ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯದ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಬ್ಲಾಕ್ ವತಿಯಿಂದ ಕಾರ್ಯ ನಿರ್ವಹಿಸುವ ಬಗ್ಗೆ ಬ್ಲಾಕ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ ಸದಸ್ಯರ ಅಭಿಪ್ರಾಯಗಳನ್ನು ಪಡೆದುಕೊಂಡು ಬ್ಲಾಕ್‌ನ ವ್ಯಾಪ್ತಿಯಲ್ಲಿ ಬರುವ 18 ವಾರ್ಡ್‌ಗಳಲ್ಲಿ ಮತದಾರರನ್ನು ಸಂಪರ್ಕಿಸಿ ಭೇಟಿ ಮಾಡುವಲ್ಲಿ ಆಯಾ ವಾರ್ಡಿನ ಮ.ನ.ಪಾ ಸದಸ್ಯರೊಂದಿಗೆ ವಾರ್ಡ್ ಅಧ್ಯಕ್ಷರು ಹಾಗೂ ಬೂತ್ ಆಧ್ಯಕ್ಷರು ಸೇರಿಕೊಂಡು ಕಾರ್ಯ ನಿರ್ವಹಿಸಬೇಕೆಂದು ತೀರ್ಮಾನಿಸಿ ಜವಾಬ್ದಾರಿಯನ್ನು ನೀಡಲಾಯಿತು.
ಸಭೆಯಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್, ಪರಿಶಿಷ್ಠ ಜಾತಿ/ಪಂಗಡದ ರಾಜ್ಯ ಸಂಚಾಲಕ ಟಿ.ಹೊನ್ನಯ್ಯ, ಜಿಲ್ಲಾ ಸೇವಾದಳದ ಮಾಜಿ ಮುಖ್ಯ ಸಂಘಟಕ ಎ. ಸುರೇಶ್ ಶೆಟ್ಟಿ, ದಕ್ಷಿಣ ಬ್ಲಾಕ್ ವಿಧಾನ ಪರಿಷತ್ ಚುನಾವಣಾ ಸಮಿತಿಯ ಅಧ್ಯಕ್ಷ ದಿನೇಶ್ ಬಿ. ರಾವ್, ಬ್ಲಾಕ್ ಉಪಾದ್ಯಕ್ಷ ಜೆ.ಸದಾಶಿವ ಅಮೀನ್, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್. ಮಾಜಿ ಮೇಯರ್ ಜೆಸಿಂತಾ ವಿಜಯ ಅಲ್ಪ್ರೆಡ್, ಮ.ನ.ಪ. ಸದಸ್ಯರಾದ ಶೈಲಜಾ, ಪ್ರಕಾಶ ಅಳಪೆ, ಎಪಿಎಂಸಿ ಸದಸ್ಯ ಭರತೇಶ ಅಮೀನ್ ಮ.ನ.ಪಾ. ಮಾಜಿ ಸದಸ್ಯರಾದ ಭಾಸ್ಕರ ರಾವ್ ಹೈದರಾಲಿ ಉಪಸ್ಥಿತರಿದ್ದರು.