×
Ad

ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ: ಪದಾಧಿಕಾರಿಗಳ ಆಯ್ಕೆ

Update: 2018-06-01 18:45 IST

ಉಡುಪಿ, ಜೂ.1: ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ 34ನೇ ವರ್ಷದ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ಉಮೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ಸಮಿತಿಯ ಕಾರ್ಯಾಲಯದಲ್ಲಿ ಇತ್ತೀಚೆಗೆ ಜರಗಿತು.

ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವರದಿ ಮಂಡಿಸಿದರು. ಕೋಶಾಧಿಕಾರಿ ಚಂದ್ರಹಾಸ ಪೈ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ನಂತರ ಸಮಿತಿಯ ಗೌರವಾಧ್ಯಕ್ಷ ಶೇಖರ ಕಲ್ಮಾಡಿ ಉಸ್ತುವಾರಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಎ.ಶೇಖರ ಪೂಜಾರಿ, ಉಮೇಶ ಜಿ.ಶೆಟ್ಟಿ, ಶೇಖರ ಕಲ್ಮಾಡಿ, ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜಲೇಶ್ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ಪೈ, ಸಾಂಸ್ಕೃತಿಕ ಕಾರ್ಯದರ್ಶಿ ಸಮರನಾಥ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಭಟ್, ಮಹಾಬಲ ಪೂಜಾರಿ, ಅನಿಲ್ ಕುಮಾರ್ ಶೆಟ್ಟಿ, ರಮೇಶ್ ನಾಯ್ಕಿ, ಅನಿಲ್ ಕುಮಾರ್, ಪುಷ್ಪರಾಜ್, ಭಾಸ್ಕರ ಶೆಟ್ಟಿ, ಅಶೋಕ್ ಕುಮಾರ್, ರವೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಳಾಗಿ ರಾಜೇಶ್ ಆಚಾರ್ಯ, ಪ್ರಶಾಂತ ಆಚಾರ್ಯ, ರಂಜಿತ್ ನಾಯ್ಕಿ, ಕಾರ್ತಿಕ್ ಶೆಟ್ಟಿ, ಯತೀಶ್ ಕುಮಾರ್, ಗೋಪಾಲ್ ಜಿ., ಸಂತೋಷ್ ಸಿ.ಪೈ, ಸುಖೇಶ್ ನಾಯಕ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News