×
Ad

​ಟಿಡಿಎಫ್‌ನಲ್ಲಿ 19ನೆ ವರ್ಷಾಚರಣೆಯ ಮಾರಾಟ

Update: 2018-06-01 18:48 IST

ಮಂಗಳೂರು, ಜೂ.1: ವಿಶೇಷ ಹಾಗೂ ಆಕರ್ಷಣೀಯ ಚಿನ್ನ ಹಾಗೂ ವಜ್ರಗಳ ವಿನ್ಯಾಸಭರಿತ ಆಭರಣಗಳಿಗೆ ಹೆಸರುವಾಸಿಯಾಗಿರುವ ಟಿಡಿಎಫ್ ಡೈಮಂಡ್ ಫ್ಯಾಕ್ಟರಿಯು 19ನೆ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಇದರಂಗವಾಗಿ ಮಂಗಳೂರಿನ ಫಳ್ನೀರ್‌ನಲ್ಲಿರುವ ನೂತನ ಮಳಿಗೆಯಲ್ಲಿ ವಿಶೇಷ ಮಾರಾಟ ಜೂನ್ 2ರಿಂದ 17ರವರೆಗೆ ಆಯೋಜಿಸಲಾಗಿದೆ.

ಈ ವಿಶೇಷ ಮಾರಾಟದ ಅಂಗವಾಗಿ ಮಂಗಳೂರಿನ ಟಿಡಿಎಫ್ ಮಳಿಗೆಯಲ್ಲಿ ವಜ್ರಾಭರಣಗಳ ಮೇಲೆ ಶೂನ್ಯ ತಯಾರಿಕಾ ವೆಚ್ಚ, ಜದಾವು ಆಭರಣಗಳ ಮೇಲೆ ಶೇ. 19 ರಿಯಾಯಿತಿ ಹಾಗೂ ಚಿನ್ನಾಭರಣಗಳ ಮೇಲೆ ಶೇ. 50 ತಯಾರಿಕ ವೆಚ್ಚದಲ್ಲಿ ಕಡಿತದ ವಿನಾಯಿತಿಯನ್ನು ನೀಡಲಾಗುತ್ತಿದೆ.

ಈ ವರ್ಷದ ಆರಂಭದಲ್ಲಿ ಉದ್ಘಾಟನೆಗೊಂಡಿರುವ ಟಿಡಿಎಫ್‌ನ ಮಂಗಳೂರು ಮಳಿಗೆಯು ಈಗಾಗಲೇ ಮಂಗಳೂರು ಮಾತ್ರವಲ್ಲದೆ, ಬೆಂಗಳೂರು, ಉಡುಪಿ, ಮಣಿಪಾಲ ಮತ್ತು ಮುಂಬೈನ ಗ್ರಾಹಕರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮುಂಬೈನ ಬಾಂದ್ರಾ, ಅಂಧೇರಿ ಮತ್ತು ವಾಸಿಯಲ್ಲಿ ಪ್ರೀಮಿಯಂ ರಿಟೇಲ್ ಮಳಿಗೆಯನ್ನು ಹೊಂದಿರುವ ಟಿಡಿಎಫ್ ಸ್ವಂತ ಉತ್ಪಾದನಾ ಘಟಕವನ್ನು ಕೂಡಾ ಹೊಂದಿದೆ. ಈ ಮೂಲಕ ಟಿಡಿಎಫ್ ಗ್ರಾಹಕರಿಗೆ ಗುಣಮಟ್ಟದ, ವಿನ್ಯಾಸಭರಿತ ಹಾಗೂ ಅತ್ಯುತ್ತಮ ಬೆಲೆಯಲ್ಲಿ ಚಿನ್ನಾಭರಣಗಳನ್ನು ನೀಡುತ್ತಿದೆ.

ಜಿಐಎ, ಐಜಿಐ ಮತ್ತು ಹಾಲ್‌ಮಾರ್ಕ್ ಪ್ರಮಾಣಪತ್ರಗಳೊಂದಿಗೆ ಉನ್ನತ ಗುಣಮಟ್ಟದ ಆಭರಣಗಳನ್ನು ಅತ್ಯುತ್ತಮ ಬೆಲೆಯಲ್ಲಿ ಟಿಡಿಎಫ್ ನೀಡುವುದರ ಜತೆಗೆ ವಿಭಿನ್ನ ಹಾಗೂ ಅಪಾರ ಸಂಗ್ರಹವನ್ನೂ ಹೊಂದಿದೆ.

1. ರೊಝಾನಾ: ದಿನನಿತ್ಯ ಉಪಯೋಗಿಸುವ ಆಭರಣಗಳು 9900 ರೂ. ಮೇಲ್ಪಟ್ಟು ಲಭ್ಯವಿದೆ.

2. ಶುಭ್: ವಧುವಿನ ಆಭರಣಗಳ ಸಂಗ್ರಹದಲ್ಲಿ ವಜ್ರದ ಆಭರಣಗಳು (ನಿಶ್ಚಿತಾರ್ಥ ಮತ್ತು ವಿವಾಹ ಉಂಗುರಗಳು ಸೇರಿದಂತೆ) ಅನ್‌ಕಟ್/ ಪೋಲ್ಕಿ/ ಜದಾವು ಆಭರಣಗಳು.ಟೆಂಪಲ್ ಗೋಲ್ಡ್ ಆಭರಣಗಳು (ದೀಪ್ ಸೌತ್ ನಕಾಶ್ ಮತ್ತು ಕೊಲ್ಲಾಪುರ ವಿನ್ಯಾಸದಿಂದ ಕೂಡಿದ)ಪಾರಂಪರಿಕ ಚಿನ್ನದ ಆಭರಣಗಳು (ಆಕ್ಸಿಡೈಸ್ಡ್ ಆಭರಣಗಳು ಮತ್ತು ಕುಂದನ್ ಆಭರಣಗಳು)

3. ರಾಶಿ- ಎಲ್ಲಾ ರೀತಿಯ ರಾಶಿರತ್ನಗಳು ಲಭ್ಯವಿದೆ.ವಧುವಿನ ಆಭರಣ ತಜ್ಞರು ‘‘ಟಿಡಿಎಫ್ ಬ್ರೈಡ್ಸ್ ಪ್ರೈಡ್’ ಆರಂಭಿಸಿದ್ದು, ವಧುಗಳು ತಮ್ಮ ಆಭರಣಗಳನು ಅತ್ಯಂತ ಸುಲಭ ಹಾಗೂ ಆಸಕ್ತಿಯಿಂದ ಖರೀದಿಸಲು ಟಿಡಿಎಫ್‌ನ ಯೋಜನೆ ಇದಾಗಿದೆ. ವಧುವಿನ ಅಭಿರುಚಿ ಹಾಗೂ ಬಜೆಟ್‌ಗೆ ತಕ್ಕುದಾದ ರೀತಿಯಲ್ಲಿ ವಿನ್ಯಾಸಭರಿತ ಆಭರಣಗಳನ್ನು ಒದಗಿಸುವುದು ಈ ಕಲ್ಪನೆಯಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

1999ರಲ್ಲಿ ಮುಂಬೈನಲ್ಲಿ ಟಿಡಿಎಫ್- ಡೈಮಂಡ್ ಫ್ಯಾಕ್ಟರಿ ಆರಂಭಗೊಂಡಿದ್ದು, ಇದೀಗ ಮುಂಬೈ ಮಾತ್ರವಲ್ಲದೆ, ದೇಶದ ಉದ್ದಗಲಕ್ಕೂ ಟಿಡಿಎಫ್ ಅಪಾರ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ.

ಟಿಡಿಎಸ್- ದ ಡೈಮಂಡ್ ಫ್ಯಾಕ್ಟರಿ ಬ್ರಾಂಡ್ ಇಂದು ದೇಶದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಪ್ರಮುಖ ಆಭರಣಗಳ ಸಂಸ್ಥೆಗಳಲ್ಲಿ ಒಂದಾಗಿದೆ. ಈಗಾಗಲೇ ಅಂಧೇರಿ, ಬಾಂದ್ರಾ, ವಾಶಿಯಲ್ಲಿ ಮಳಿಗೆಯನ್ನು ಹೊಂದಿದ್ದು, ಮಂಗಳೂರಿನಲ್ಲಿ ನಾಲ್ಕನೆ ಮಳಿಗೆ ಕಾರ್ಯಾಚರಿಸುತ್ತಿದೆ.ಟಿಡಿಎಫ್‌ನ ವರ್ಷಾಚರಣೆಯ ಹೊಸ ವಿನ್ಯಾಸಗಳನ್ನು ವೀಕ್ಷಿಸಲು ಟಿಡಿಎಫ್‌ನ ಮಂಗಳೂರು ಮಳಿಗೆಗೆ ಭೇಟಿ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News