ಬಂಟ್ವಾಳ: 'ಕಾನೂನು ಸಾಕ್ಷರತಾ ರಥ'
ಬಂಟ್ವಾಳ, ಜೂ. 1: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ "ಕಾನೂನು ಸಾಕ್ಷರತಾ ರಥ" ಮತ್ತು "ಸಂಚಾರಿ ನ್ಯಾಯಾಲಯ ಅಭಿಯಾನ" ಕಾರ್ಯಕ್ರಮ ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮುಹಮ್ಮದ್ ಇಮ್ತಿಯಾರ್ ಅಹ್ಮದ್ ಅವರು ಸಂಚಾರಿ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್., ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ದ.ಕ. ಕೇಂದ್ರ ಸರಕಾರಿ ವಕೀಲರಾದ ಪ್ರಸಾದ್ ಕುಮಾರ್ ರೈ, ಚಂದ್ರಶೇಖರ ಪುಂಚಮೆ, ಆಶಾ ಪ್ರಸಾದ್ ರೈ, ವಿನೋದ ಎಸ್., ಚಂದ್ರಶೇಖರ ಬೈರಿಕಟ್ಟೆ, ಸತೀಶ್ ಬಿ., ಆಶಾಮಣಿ ಡಿ.ರೈ, ಯಶೋಧಾ, ಸುರೇಶ್ ನಾವೂರು, ಶೈಲಜಾ ರಾಜೇಶ್, ವಿರೇಂದ್ರ ಎಂ.ಸಿದ್ದಕಟ್ಟೆ, ರಾಲ್ಫ್ ಎಲೆಕ್ಸ್ ಸಿಕ್ವೇರಾ, ರಿಚಾರ್ಡ್ ಡಿಕೋಸ್ತ, ಸಿಬ್ಬಂದಿ ನರಸಿಂಹ ಗೌಡ ಮತ್ತಿತರರು ಉಪಸ್ಥಿತರಿದ್ದರು.