×
Ad

ಬಂಟ್ವಾಳ: ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

Update: 2018-06-01 19:11 IST

ಬಂಟ್ವಾಳ, ಜೂ. 1: ಶ್ರೀಅರಸು ವೈಧ್ಯನಾಥ ದೂಮಾವತಿ ಬಂಟ ದೈವಸ್ಥಾನ ಸುಜೀರು ಗುತ್ತು ಹಾಗೂ ಬಂಟ್ವಾಳ ರೋಟರಿ ಕ್ಲಬ್ ಇವರ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಕಾರ್ಯಕ್ರಮ ಇಲ್ಲಿನ ಶ್ರೀದೈವದ ಭಂಡಾರ ಮನೆಯಲ್ಲಿ ಗುರುವಾರ ರಾತ್ರಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷ ಮಂಜುನಾಥ ಆಚಾರ್ಯ, ರೋಟರಿ ಮಾಜಿ ಅಧ್ಯಕ್ಷ ರಮೇಶಾನಂದ ಸೋಮಯಾಜಿ, ಐತ್ತಪ್ಪ ಆಳ್ವ ಸುಜೀರುಗುತ್ತು, ಚಂದ್ರಶೇಖರ ಗಾಂಭೀರ ಸುಜೀರು ಗುತ್ತು, ಪ್ರವೀಣ್ ಆಳ್ವ ಸಜೀಪ ಉಪಸ್ಥಿತರಿದ್ದರು.

ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು ಕಾರ್ಯಕ್ರಮ ನಿರೂಪಿಸಿದರು. ಒಟ್ಟು 88 ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News