‘ಮೇಲ್ತೆನೆ’ಯಿಂದ ಇಫ್ತಾರ್ ಕೂಟ
Update: 2018-06-01 20:11 IST
ಮಂಗಳೂರು, ಜೂ.1: ದೇರಳಕಟ್ಟೆಯ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಸಂಘದ ಕಚೇರಿಯಲ್ಲಿ ಗುರುವಾರ ಇಫ್ತಾರ್ ಕೂಟ ಆಚರಿಸಲಾಯಿತು.
ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಅಲಿಕುಂಞಿ ಪಾರೆ, ಇಸ್ಮತ್ ಪಜೀರ್ ‘ಇಫ್ತಾರ್ ಕೂಟ’ದ ಮಹತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭ ‘ಮೇಲ್ತೆನೆ’ಯ ನೂತನ ಸದಸ್ಯ ನಿಝಾಮ್ ಬಜಾಲ್ ಅವರು ‘ಬ್ಯಾರಿಙಲೆ ಮಂಙಾಲ’ ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧದ ಬಗ್ಗೆ ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಬಶೀರ್ ಕಲ್ಕಟ್ಟ, ಕೋಶಾಧಿಕಾರಿ ರಫೀಕ್ ಪಾಣೇಲ, ಜೊತೆ ಕಾರ್ಯದರ್ಶಿ ನಿಯಾಝ್ ಮಾಸ್ಟರ್, ಸದಸ್ಯರಾದ ಇಸ್ಮಾಯೀಲ್ ಮಾಸ್ಟರ್, ಮನ್ಸೂರ್ ಅಹ್ಮದ್ ಸಾಮಣಿಗೆ, ಸೈಫ್ ಕುತ್ತಾರ್, ಮುಹಮ್ಮದ್ ಭಾಷಾ ನಾಟೆಕಲ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಸ್ವಾಗತಿಸಿ, ವಂದಿಸಿದರು.