ಉಡುಪಿ: ವಿಶ್ವ ಪರಿಸರ ದಿನ
ಉಡುಪಿ, ಜೂ.1: ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಜೂ.5ರಂದು ಪರಿಸರ ಜಾಥಾ ಮತ್ತು ಸಭಾ ಕಾರ್ಯಕ್ರಮ ತ್ರಾಸಿಯಲ್ಲಿ ನಡೆಯಲಿದೆ.
ಜೂ.5ರಂದು ಬೆಳಗ್ಗೆ 8 ಗಂಟೆಗೆ ಮರವಂತೆ ಬೀಚ್‌ನಿಂದ ಕೊಂಕಣಿ ಹಾರ್ವಿಭವನ ತ್ರಾಸಿವರೆಗೆ ಪರಿಸರ ಜಾಥಾ ನಡೆಯಲಿದೆ. 9 ಗಂಟೆಗೆ ತ್ರಾಸಿಯ ಬೀಚ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸೌಧದ ಉದ್ಘಾಟನೆ ನಡೆಯಲಿದ್ದು, ಮರಳು ಶಿಲ್ಪ ಕಲಾಕೃತಿ ಪ್ರದರ್ಶನ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಭೂಬಾಲನ್ ನೆರವೇರಿಸುವರು. ಬೆಳಗ್ಗೆ 10ರಿಂದ ಸಭಾ ಕಾರ್ಯಕ್ರಮ ಕೊಂಕಣಿ ಖಾರ್ವಿ ಭವನದಲ್ಲಿ ನಡೆಯಲಿದ್ದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅದ್ಯಕ್ಷತೆ ಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.