×
Ad

ಕಡಬ: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

Update: 2018-06-01 21:23 IST

ಕಡಬ, ಜೂ. 1. ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಗುರುವಾರದಂದು ಕುಂತೂರಿನಿಂದ ವರದಿಯಾಗಿದೆ.

ಐತ್ತೂರು ಗ್ರಾಮದ ಮಾಯಿಪತ್ತೆಪಾಲು ನಿವಾಸಿ ಹುಕ್ರಪ್ಪ ಗೌಡ ಎಂಬವರ ಪುತ್ರಿ ಯಶೋಧಾ (37) ಎಂಬಾಕೆಯನ್ನು ಕುಂತೂರು ಗ್ರಾಮದ ಬಾಚಡ್ಕ‌ ಎಂಬಲ್ಲಿಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಗುರುವಾರದಂದು ಆಕೆಯ ಮನೆಯವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕುಂತೂರಿನ ಮನೆಗೆ ತೆರಳಿದ ಆಕೆಯ ಹೆತ್ತವರಿಗೆ ಬೀಗ ಹಾಕಿರುವುದು ಕಂಡುಬಂದಿದ್ದು, ಬಳಿಕ ಆಕೆ ಕೆಲಸ ನಿರ್ವಹಿಸುತ್ತಿದ್ದ ಕಡಬದ ಖಾಸಗಿ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿಗೂ ಬಾರದೆ ಇದ್ದ ಹಿನ್ನೆಲೆಯಲ್ಲಿ ಸಂಬಂಧಿಕರಲ್ಲೆಲ್ಲಾ ಹುಡುಕಾಡಿದಾಗ ಆಕೆ ತನ್ನಿಬ್ಬರು ಮಕ್ಕಳಾದ ದೀಕ್ಷಾ(11) ಹಾಗೂ ರಕ್ಷಾ(10) ಮಕ್ಕಳೊಂದಿಗೆ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಈ ಬಗ್ಗೆ ಶುಕ್ರವಾರದಂದು ಆಕೆಯ ತಂದೆ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News