ಹುಸೈನಬ್ಬ ಸಾವಿನ ಪ್ರಕರಣ: ತನಿಖೆಗೆ ಸಿಪಿಎಂ ಆಗ್ರಹ
Update: 2018-06-01 21:42 IST
ಉಡುಪಿ, ಜೂ.1: ಜಾನುವಾರು ವ್ಯಾಪಾರಿ ಮಂಗಳೂರು ಜೋಕಟ್ಟೆ ನಿವಾಸಿ ಹುಸೈನಬ್ಬ ಅನುಮಾನಾಸ್ಪದ ಸಾವಿನ ಕುರಿತು ಸಮಗ್ರ ತನಿಖೆ ನಡೆಸು ವಂತೆ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಘಟನೆ ನಡೆದ ಕೂಡಲೇ ಕಾರ್ಯತತ್ಪರರಾದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ನಡೆ ಅಭಿನಂದನೀಯ. ಹುಸೇನಬ್ಬನವರ ಕುಟುಂಬದವರು, ಬಜರಂಗದಳದ ಕಾರ್ಯಕರ್ತರು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಆಳವಾದ ತನಿಖೆ ಅಗತ್ಯವಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಲ್ಲಾ ರಾಜ ಕೀಯ ಪಕ್ಷಗಳು, ಜನಪರ ಸಂಘಟನೆಗಳು ಈ ಕೊಲೆಯನ್ನು ಖಂಡಿಸಬೇಕು ಹಾಗೂ ಪ್ರತಿಭಟನೆ ನಡೆಸಲು ಒಂದಾಗಬೇಕೆಂದು ಸಿಪಿಐಎಂ ಒತ್ತಾಯಿಸಿದೆ.