ಬಾವಿಗೆ ಬಿದ್ದು ಮಹಿಳೆ ಮೃತ್ಯು
Update: 2018-06-01 21:44 IST
ಕುಂದಾಪುರ, ಜೂ.1: ಕೋಣಿ ಶಾಲೆ ಬಳಿ ಮೇ 31ರಂದು ಮಧ್ಯಾಹ್ನ ವೇಳೆ ಮಹಿಳೆಯೊಬ್ಬರು ಮನೆಯ ಬಾವಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿ ಯಾಗಿದೆ.
ಮೃತರನ್ನು ಕೋಣಿ ಶಾಲೆ ಬಳಿ ನಿವಾಸಿ ರೋಹಿಣಿ ಜೋಗಿ(65) ಎಂದು ಗುರುತಿಸಲಾಗಿದೆ. ಇವರು ಮನೆಯ ಬಾವಿಯಲ್ಲಿದ್ದ ತೆಂಗಿನ ಕಾಯಿಯನ್ನು ಇಣುಕಿ ನೋಡುವಾಗ ಆಯತಪ್ಪಿಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.