ಸಿಇಟಿ ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿನಿಂದ ಗರಿಷ್ಠ ಮಟ್ಟದ ಸಾಧನೆ
ಮೂಡುಬಿದಿರೆ, ಜೂ.1: 2018ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಗರಿಷ್ಠ ವಿದ್ಯಾರ್ಥಿಗಳ ತೇರ್ಗಡೆಯೊಂದಿಗೆ ಗರಿಷ್ಠ ಮಟ್ಟದ ಸಾಧನೆ ಮಾಡಿದೆ.
ಇಂಜಿನಿಯರಿಂಗ್, ಬಿ.ಎಸ್ ಅಗ್ರಕಲ್ಚರ್, ವಟರ್ನರಿ ಸೈನ್ಸ್, ಬಿ.ಫಾರ್ಮ, ಡಿ.ಫಾರ್ಮ, ಬಿ.ಎಸ್ ಅಗ್ರಿಕಲ್ಚರ್ ಪ್ರಾಕ್ಟಿಕಲ್, ವೆಟರರ್ನರಿ ಸೈನ್ಸ್ ಪ್ರಾಕ್ಟಿಕಲ್ ವಿಷಯಗಳನ್ನು ಸೇರಿ 1ರಿಂದ 100 ಒಳಗಡೆ 99 ರ್ಯಾಂಕ್, 200 ಒಳಗಡೆ 224, 300 ಒಳಗಡೆ 312 ರ್ಯಾಂಕ್, 400 ಒಳಗಡೆ 412 ರ್ಯಾಂಕ್, 500 ಒಳಗಡೆ 498 ರ್ಯಾಂಕ್ ಗಳಿಸಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಶಶಾಂಕ್ ಡಿ. 12 ನೇ ರ್ಯಾಂಕ್, ಕಾರ್ತಿಕ್ ಎಸ್.ಮರಾಠೆ 59ನೇ ರ್ಯಾಂಕ್, ಬಿ.ಎಸ್ ಅಗ್ರಿಕಲ್ಚರ್(ಪ್ರಾಕ್ಟಿಕಲ್)- ಮೆಲಿಶಾ ರೊಡ್ರಿಗಸ್ 2ನೇ ರ್ಯಾಂಕ್, ಹಲ್ಲೆಪ್ಪ ಗೌಡ 10ನೇ ರ್ಯಾಂಕ್, ವಟರ್ನರಿ ಸೈನ್ಸ್(ಪ್ರಾಕ್ಟಿಕಲ್) ದರ್ಶನ್ 4ನೇ ರ್ಯಾಂಕ್, ಬಿಎಸ್ ಅಗ್ರಿಕಲ್ಚರ್‌ನಲ್ಲಿ ಸೌರವ್ ಪಪತಿ 7ನೇ ಹಾಗೂ ಪ್ರಸನ್ನ ಭಟ್ 10ನೇ ರ್ಯಾಂಕ್ ಪಡೆದಿದ್ದಾರೆ.
ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.