ಈ ದೇಶದಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಬಳಸಿದರೆ ದಿನಕ್ಕೆ 3.50 ರೂ. ತೆರಿಗೆ!

Update: 2018-06-01 17:32 GMT

ಲಂಡನ್, ಜೂ. 1: ಫೇಸ್‌ಬುಕ್, ವಾಟ್ಸ್‌ಆ್ಯಪ್, ವೈಬರ್ ಮತ್ತು ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಜನರ ಮೇಲೆ ಉಗಾಂಡ ದೇಶವು ವಿವಾದಾಸ್ಪದ ತೆರಿಗೆ ವಿಧಿಸಿದೆ.

ಊಹಾಪೋಹಗಳ ಹರಡುವಿಕೆಯನ್ನು ನಿಗ್ರಹಿಸಲು ಹಾಗೂ ಕಂದಾಯ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಅಬಕಾರಿ ಸುಂಕ (ತಿದ್ದುಪಡಿ) ಮಸೂದೆಗೆ ತರಲಾಗಿರುವ ನೂತನ ತಿದ್ದುಪಡಿಯ ಪ್ರಕಾರ, ಈ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರ ಮೇಲೆ ಪ್ರತಿ ದಿನ 200 ಶಿಲ್ಲಿಂಗ್ (ಸುಮಾರು 3.50 ರೂಪಾಯಿ) ತೆರಿಗೆ ವಿಧಿಸಲಾಗುತ್ತದೆ ಎಂದು ಬಿಬಿಸಿ ಗುರುವಾರ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮ ಕಾನೂನಿಗೆ ತಿದ್ದುಪಡಿ ತರುವುದಕ್ಕೆ ಉಗಾಂಡ ಅಧ್ಯಕ್ಷ ಯೊವೆರಿ ಮುಸೆವೆನಿ ಮಾರ್ಚ್‌ನಲ್ಲೇ ಮುಂದಾಗಿದ್ದರು. ಈ ಮಾಧ್ಯಮಗಳು ಊಹಾಪೋಹಗಳನ್ನು ಹರಡುತ್ತವೆ ಎನ್ನುವುದು ಅವರ ಆರೋಪವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News