×
Ad

ಬಂಟ್ವಾಳ: ಅಳಿಯನನ್ನು ಕಡಿದು ಕೊಲೆ ಮಾಡಿದ ಮಾವ

Update: 2018-06-02 16:22 IST

ಬಂಟ್ವಾಳ, ಜೂ. 2: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನನ್ನು ಮಾವ ಕಡಿದು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಕಟ್ಟದಪಡ್ಪು ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ರಮಾನಂದ ಪೂಜಾರಿ (40) ಮೃತರು ಎಂದು ಗುರುತಿಸಲಾಗಿದೆ. 

ಮಾವ ಅಮ್ಮು ಪೂಜಾರಿ ಅಳಿಯ ರಮಾನಂದ ಪೂಜಾರಿಯನ್ನು ಕಡಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಯಾವ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ. 

ಘಟನಾ ಸ್ಥಳಕ್ಕೆ  ಪ್ರೊ. ಐಪಿಎಸ್ ಅಕ್ಷಯ್ ಎಂ. ಹಾಕೆ, ಗ್ರಾಮಾಂತರ ಠಾಣೆ ಎಸ್ಸೈ ಪ್ರಸನ್ನ ಕುಮಾರ್  ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News