ಜೆಇಇ ಪರೀಕ್ಷೆಯಲ್ಲಿ ಆಳ್ವಾಸ್‌ನ 572 ವಿದ್ಯಾರ್ಥಿಗಳು ಸಾಧನೆ
ಮೂಡುಬಿದಿರೆ, ಜೂ. 2 : ಜೆಇಇ ಆರ್‌ರ್ ಪರೀಕ್ಷೆಯಲ್ಲಿ ಆಳ್ವಾಸ್‌ನ 572 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಶಶಾಂಕ್ ಡಿ. 390ರಲ್ಲಿ 272ಅಂಕ ಗಳಿಸಿ ರಾಷ್ಟ್ರಮಟ್ಟದ ಒಬಿಸಿ ಕೆಟಗರಿಯಲ್ಲಿ 92ನೇ ರ್ಯಾಂಕ್‌ಗೆ ಪಡೆದಿದ್ದಾರೆ.
ಎಸ್ ಕೆಟಗರಿಯಲ್ಲಿ ಸುದರ್ಶನ ಜಿ 79ನೇ ರ್ಯಾಂಕ್ ,ಶ್ರೀಯಾ ಪ್ರಶಾಂತ್ ರೈಕಾರ್ 162ನೇ ರ್ಯಾಂಕ್ , ಭಾಗ್ಯಶ್ರೀ 263ನೇ ರ್ಯಾಂಕ್ ,ಗೌತಮಬುದ್ಧ 416ನೇ ರ್ಯಾಂಕ್ ,ಯಶಸ್ ಪಿ 697ನೇ ರ್ಯಾಂಕ್ ಗಳಿಸಿದ್ದಾರೆ.
ಸುಭಾನಹಮದ್ , ಖುಷಿ ಎಸ್. ಕೊಪ್ಪದ್ , ನವನೀತ್ ಪಿ , ಗಗನ್‌ಆರ್ ಪ್ರೀತ್ , ಜಯಂತ್‌ಗೌಡ, ಪ್ರಗತಿಚಂದ್ರಮೌಲಿ , ಜಿ ಗಗನ್ , ವಿಶ್ವನಾಥ್ ಎ ಕುಲಕರ್ಣಿ, ದಿಲೀಪ್‌ಕುಮಾರ್ , ಯಶಸ್‌ಎಸ್ ವಿ, ತುಷಾರ್ ಎ ನಂದ್ರೆ, ಪಂಚಾಕ್ಷರಿ ಹಿರೇಮಠ್ , ಹೇಮಂತ್‌ಕುಮಾರ್230ಕ್ಕಿಂತ ಹೆಚ್ಚು ಅಂಕ ಗಳಿಸುವ ಮೂಲಕ ಸಾಧನೆಗೈದಿದ್ದಾರೆ ಹಾಗೂ ಆಳ್ವಾಸ್‌ನ 19 ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ1000ಒಳಗೆ ರ್ಯಾಂಕ್ ಗಳಿಸುವ ಮೂಲಕ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. 248ಕ್ಕೂ ಅಧಿಕ ವಿದ್ಯಾರ್ಥಿಗಳು 150ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
ಐಐಟಿ ರಾರ್ಕಿ, ಐಐಟಿ ಕರಗ್‌ಪುರ್, ಎಸ್‌ಪಿಎ ದೆಹಲಿ, ಎನ್‌ಐಟಿ ಕ್ಯಾಲಿಕಟ್, ಎನ್‌ಐಟಿ ರಾಯ್‌ಪುರ್, ಎನ್‌ಐಟಿ ನಾಗಾಪುರ್ ಮುಂತಾದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಆರ್ಕಿಟೆಕ್ಚರ್‌ಕೋರ್ಸು ಮಾಡಲು ಅರ್ಹತಾ ಪರೀಕ್ಷೆ ಇದಾಗಿದ್ದು ಆಳ್ವಾಸ್ ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 674ವಿದ್ಯಾರ್ಥಿಗಳಲ್ಲಿ 572ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.