×
Ad

ಬಂಟ್ವಾಳದಲ್ಲಿ ಬಿಜೆಪಿ ವಿಜಯೋತ್ಸವ: ಶಾಸಕ ರಾಜೇಶ್ ನಾಯ್ಕ ರೋಡ್‌ಶೋ

Update: 2018-06-02 20:02 IST

ಬಂಟ್ವಾಳ, ಜೂ. 2: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಶಾಸಕ ರಾಜೇಶ್ ನಾಯ್ಕಾ ಅವರ ವಿಜಯೋತ್ಸವ ಮೆರವಣಿಗೆ ಬಿ.ಸಿ.ರೋಡ್‌ನಲ್ಲಿ ಶನಿವಾರ ಮಧ್ಯಾಹ್ನ ನಡೆಯಿತು.

ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ತೆರದ ವಾಹನದಲ್ಲಿ ಆರಂಭಗೊಂಡ ಶಾಸಕ ರಾಜೇಶ್ ನಾಯ್ಕಾರವರ ವಿಜಯೋತ್ಸವ ಮೆರವಣಿಗೆ ಬಿ.ಸಿ. ರೋಡ್ ರಾಜಾ ರಸ್ತೆಯಲ್ಲಿ ಸಾಗಿ ಬಂದು, ಗಾಣದಪಡ್ಪು, ಬಂಟ್ವಾಳ ನೆರೆ ವಿಮೋಚನ ರಸ್ತೆಯ ಮೂಲಕ ಬಂಟ್ವಾಳ ನಗರವನ್ನು ಪ್ರವೇಶಿಸಿತು.
ಅಲ್ಲಿಂದ ಬಡ್ಡಕಟ್ಟೆ, ಜಕ್ರಿಬೆಟ್ಟು ಮಾರ್ಗವಾಗಿ ಬಂಟ್ವಾಳ ಬೈಪಾಸ್ ರಾಮನಗರ ಜಂಕ್ಷನ್‌ನಲ್ಲಿ ವಿಜಯೋತ್ಸವ ಸಂಪನ್ನ ಗೊಂಡಿತು.

ತೆರೆದವಾಹನದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು.

ಗೊಂಬೆ ಕುಣಿತ, ಕೀಲುಕುದುರೆ, ಚೆಂಡೆ, ನಾಸಿಕ್ ಬ್ಯಾಂಡ್, ಕೊಂಬು ಕಹಳೆ ಮೆರವಣಿಗೆಗೆ ವಿಶಷ ಮೆರಗು ನೀಡಿತು. ಮೆರವಣಿಗೆಯುದ್ದಕ್ಕೂ ಶಾಸಕ ರಾಜೇಶ್ ನಾಯ್ಕಾ ಅವರಿಗೆ ಹಾರ ಹಾಕಿ ಪೇಟೆ ತೊಡಿಸಿ ಅಭಿನಂದಿಸಿದರು.

ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಸುಗುಣ ಕಿಣಿ,ಭಾಸ್ಕರ ಟೈಲರ್,ಪ್ರಮುಖರಾದ ಉದಯಕುಮಾರ್ ರಾವ್ ಬಂಟ್ವಾಳ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಭಂಡಾರಿ, ದಿನೇಶ್ ಅಮ್ಟೂರು, ರೋನಾಲ್ಡ್ ಡಿಸೋಜ, ಪ್ರಬಾಕರ ಪ್ರಭು, ಗಣೇಶ್ ರೈ ಮಾಣಿ, ಗಂಗಾಧರ್ ಪರಾರಿ, ಮಚ್ಚೇಂದ್ರ ಸಾಲಿಯಾನ್, ಯಶೋಧಾ ಕುಲಾಲ್, ಸುಶ್ಮಾ ಚರಣ್, ಸೀತರಾಮ ಪೂಜಾರಿ, ರಮಾನಾಥ ರಾಯಿ, ಹರೀಶ್ ಆಚಾರ್ಯ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಶಿವಪ್ತಸಾದ್ ಬಂಟ್ವಾಳ, ರಮಾನಾಥ ಪೈ ಬಂಟ್ವಾಳ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News