ಜೂ. 3ರಂದು ಕಿನ್ಯದಲ್ಲಿ ಮಜ್ಲಿಸುನ್ನೂರ್ ಸಂಗಮ
Update: 2018-06-02 20:06 IST
ಮಂಗಳೂರು, ಜೂ. 2: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯ ವತಿಯಿಂದ ಪ್ರತಿ ತಿಂಗಳು ನಡೆಯುವ ಮಜ್ಲಿಸುನ್ನೂರು, ಇಫ್ತಾರ್ ಕೂಟ ಹಾಗೂ ಪ್ರಾರ್ಥನಾ ಮಜ್ಲಿಸ್ ಕಾರ್ಯಕ್ರಮ ಜೂ. 3ರಂದು ಸಂಜೆ 4 ಗಂಟೆಗೆ ಕಿನ್ಯ ಸಿ.ಎಚ್. ನಗರದ ಎಸ್‌ಐಸಿ ಕಚೇರಿಯಲ್ಲಿ ಜರಗಲಿದೆ.
ಸೈಯದ್ ಅಮೀರ್ ತಂಙಳ್ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮಸ್ತ ಉಲಮಾ-ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಮುಸ್ತಫ ಫೈಝಿ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.