ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಾಲಮೇಳ

Update: 2018-06-02 15:20 GMT

ಉಡುಪಿ, ಜೂ.2: ಕರ್ನಾಟಕ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾರ್ಸಿ, ಬೌದ್ಧ) ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹಿಂದುಳಿದ ಸಮುದಾಯದ ಪ್ರವರ್ಗ-1ಕ್ಕೆ ಸೇರಿದ (ದಾಸರಿ, ದಾಸರು, ದಾಸ್, ಜೋಗಿ, ಕೊಠಾರಿ, ಕುಡುಬಿ, ನಾಯರಿ/ನಾರಿ, ಗೊಲ್ಲ, ಬೋವಿ) ಪ್ರವರ್ಗ-2ಎಗೆ ಸೇರಿದ (ದೋಬಿ, ಮಡಿವಾಳ, ದೇವಾಡಿಗ, ಸೇರೆಗಾರ, ಸೇರ್ವೆಗಾರ, ಸಫಲಿಗ, ಈಡಿಗ, ಬಿಲ್ಲವ, ಕುಂಬಾರ, ಕುಲಾಲ, ಪರಿಯಾಳ, ಕ್ಷೌರಿಕ, ಮಹಾಲೆ, ಚಪ್ಪೇಗಾರ್, ಕುರುಬ, ರಾಜಪುರಿ, ಪದ್ಮಶಾಲಿ, ಗಾಣಿಗ, ಕೋಟೆಗಾರ, ರಾಮಕ್ಷತ್ರಿಯ, ಕೋಟೆಕ್ಷತ್ರಿಯ, ಸ್ಥಾನಿಕ) ಪ್ರವರ್ಗ-3ಎ (ಒಕ್ಕಲಿಗ, ಗೌಡ, ಹೆಗ್ಗಡೆ), ಪ್ರವರ್ಗ-3ಬಿ (ವೀರಶೈವ ಲಿಂಗಾಯಿತ, ಬಂಟ್ಸ್) ಸಮುದಾಯಕ್ಕೆ ಸೇರಿದ 2018-19ನೇ ಸಾಲಿನ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಶೂನ್ಯ ಬಡ್ಡಿ ದರದಲ್ಲಿ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಶೇ.2ರ ಬಡ್ಡಿದರದಲ್ಲಿ ಅರಿವು ಸಾಲಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮ ಜೂ.4 ಮತ್ತು 5ರಂದು ಉಡುಪಿಯ ಮದರ್ ಆಫ್ ಸಾರೋಸ ಚರ್ಚ್‌ನ ಮೂರನೇ ಮಹಡಿಯ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯಾಲಯದಲ್ಲಿ ಬೆಳಿಗ್ಗೆ 10:00ರಿಂದ ನಡೆಯಲಿದೆ.

ವಿದ್ಯಾರ್ಥಿಗಳು , ಆದಾಯ ಮತುತಿ ಜಾತಿ ಪ್ರಮಾಣ ಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ-4, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್, ಸಿಇಟಿ/ನೀಟ್ ಪ್ರವೇಶ ಪತ್ರದ ಪ್ರತಿ, 10ನೇ ತರಗತಿ ಅಂಕಪಟ್ಟಿ ಪ್ರತಿಯ ದಾಖಲಾತಿಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳು , ಆದಾಯ ಮತುತಿ ಜಾತಿ ಪ್ರಮಾಣ ಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಾವಚಿತ್ರ-4,ಪಡಿತರಚೀಟಿಮತ್ತುಆಾರ್ ಕಾರ್ಡ್, ಸಿಇಟಿ/ನೀಟ್ ಪ್ರವೇಶ ಪತ್ರದ ಪ್ರತಿ, 10ನೇ ತರಗತಿ ಅಂಕಪಟ್ಟಿ ಪ್ರತಿಯ ದಾಖಲಾತಿಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News