×
Ad

ಸ್ವಉದ್ಯೋಗಕ್ಕಾಗಿ ಅರ್ಜಿ ಆಹ್ವಾನ

Update: 2018-06-02 20:54 IST

ಉಡುಪಿ, ಜೂ.2: 2018-19ನೇ ಸಾಲಿನ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ)ಯಡಿ ಉಡುಪಿ ಜಿಲ್ಲೆಯಲ್ಲಿ ಸ್ವಉದ್ಯೋಗ ಆರಂಭಿಸಲು ಆಸಕ್ತಿ ಇರುವ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ಒಟ್ಟು 110 ಗುರಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ.

ಈ ಯೋಜನೆಯಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗೆ ಗರಿಷ್ಠ ಯೋಜನಾ ವೆಚ್ಚ 25 ಲಕ್ಷ ರೂ. ಬ್ಯಾಂಕ್ ಸಾಲದೊಂದಿಗೆ ಹೊಸ ಕೈಗಾರಿಕೆ, ಉತ್ಪಾದನಾ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವ ವರಿಗೆ ಅವಕಾಶವಿದ್ದು, ಯೋಜನಾ ವೆಚ್ಚದ ಮೇಲೆ ಶೇ.15ರಿಂದ 35ರವರೆಗೆ ಸಹಾಯಧನ ನೀಡಲಾಗುವುದು.

ಉತ್ಪಾದನಾ ಘಟಕವಾಗಿದ್ದಲ್ಲಿ 10 ಲಕ್ಷ ರೂ. ಮತ್ತು ಸೇವಾ ಘಟಕವಾಗಿದ್ದಲ್ಲಿ 5 ಲಕ್ಷ ರೂ.ಗಳಿಗಿಂತ ಮೇಲ್ಪಟ್ಟ ಯೋಜನಾ ವೆಚ್ಚಗಳನ್ನೊಳಗೊಂಡ ಘಟಕಗಳನ್ನು ಸ್ಥಾಪಿಸುವವರು ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿದ್ದು, ಅರ್ಜಿದಾರರು ಕನಿಷ್ಠ 18 ವರ್ಷದವರಾಗಿರಬೇಕು. ಅರ್ಜಿಯನ್ನು -https://www.kviconline.gov.in/pmegpeportal/jsp/pmegponline.jsp - ವೆಬ್‌ಸೈಟ್ ಮೂಲಕ ಸಲ್ಲಿಸುವಾಗ ಪೋಟೊ, ಯೋಜನಾ ವರದಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಜನಸಂಖ್ಯೆ ಪ್ರಮಾಣ ಪತ್ರ ಹಾಗೂ ವಿದ್ಯಾಭ್ಯಾಸದ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿದ ನಂತರ ಅರ್ಜಿಯನ್ನು ಪ್ರಿಂಟ್ ಮಾಡಿ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ (ದೂರವಾಣಿ:0820-2575650/2575655), ಜಿಲ್ಲಾ ಅಧಿಕಾರಿ ಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ರಜತಾದ್ರಿ, ಮಣಿಪಾಲ ಉಡುಪಿ (ದೂರವಾಣಿ: 0820-2574855),ರಾಜ್ಯ ನಿರ್ದೇಶಕರು, ಖಾದಿ ಗ್ರಾಮೋದ್ಯೋಗ ಆಯೋಗ, ಬೆಂಗಳೂರು ( ದೂರವಾಣಿ ಸಂ: 080-25665885/25665883) ಇವರಿಗೆ ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಂಟಿ ನಿದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News