×
Ad

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಿಂದ ರಮಝಾನ್ ಕೊಡುಗೆ

Update: 2018-06-02 22:35 IST

ಮಂಗಳೂರು, ಜೂ. 2: ಮಂಗಳೂರಿನ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಮಂಗಳೂರು ಶೋರೂಂ ಗ್ರಾಹಕರಿಗಾಗಿ ಅಚ್ಚರಿಯ ರಮಝಾನ್ ಕೊಡುಗೆಯನ್ನು ಘೋಷಿಸಿದೆ.

ಐಜಿಐ ಪ್ರಮಾಣೀಕೃತ ವಜ್ರಗಳು, ಅನ್‌ಕಟ್ ವಜ್ರಗಳು ಹಾಗೂ ಅಮೂಲ್ಯವಾದ ರತ್ನದಕಲ್ಲಿನ ಜ್ಯುವೆಲ್ಲರಿಗಳು ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕವಿಲ್ಲದೆ 2018ರ ಜೂನ್ 4ರಿಂದ ಜೂನ್ 10ರವರೆಗೆ ಶೋರೂಂನಲ್ಲಿ ಮಾರಾಟವಾಗಲಿದೆಯೆಂದು ಸುಲ್ತಾನ್ ಗ್ರೂಪ್‌ನ ಚೇರ್‌ಮನ್ ಹಾಗೂ ಆಡಳಿತ ನಿರ್ದೇಶಕ ಟಿ.ಎಂ. ಅಬ್ದುಲ್ ರವೂಫ್ ತಿಳಿಸಿದ್ದಾರೆ.

ಈ ವಿಶೇಷ ಕೊಡುಗೆಯಿಂದಾಗಿ ಗ್ರಾಹಕರು ವಜ್ರಗಳನ್ನು, ಅನ್‌ಕಟ್ ವಜ್ರಗಳನ್ನು ಹಾಗೂ ಅಮೂಲ್ಯವಾದ ಜ್ಯುವೆಲ್ಲರಿಗಳನ್ನು ಯಾವುದೇ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕವಿಲ್ಲದೆ ಖರೀದಿಸಬಹುದಾಗಿದೆ ಎಂದವರು ಹೇಳಿದ್ದಾರೆ. ಈ ಕೊಡುಗೆಯ ಅವಧಿಯಲ್ಲಿ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನ್ನು ಬೆಳಗ್ಗೆ 10:30ರಿಂದ ಸಂಜೆ 6:15ರವರೆಗೆ ತೆರೆದಿಡಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ವಿಶಾಲವಾದ ಕಾರ್‌ಪಾರ್ಕಿಂಗ್ ಹಾಗೂ ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯವನ್ನು ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News