ಬೆಳ್ತಂಗಡಿ : ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು
Update: 2018-06-03 17:24 IST
ಬೆಳ್ತಂಗಡಿ, ಜೂ. 3: ಭಾರಿ ಮಳೆಯಿಂದಾಗಿ ಏಕಾಏಕಿ ನೀರು ಬಂದಿದ್ದರಿಂದ ಹೊಳೆಯ ಬದಿಯಲ್ಲಿ ಹೋಗುತ್ತಿದ್ದಾಗ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ದಾರಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ಬಂದಾರಿನಲ್ಲಿ ನಡೆದಿದೆ.
ಬಂದಾರು ಗ್ರಾಮದ ಎಂರ್ಬುಡೇಲು ನಿವಾಸಿ ವಾದಪ್ಪ ಗೌಡ, ಯಶೋದ ದಂಪತಿ ಪುತ್ರ ಕೌಶಿಕ್ (8) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಈತ ಬೆಳ್ತಂಗಡಿ ಸೈಂಟ್ ಥೋಮಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದು, ಮೃತ ಬಾಲಕ ಸಹೋದರ, ಸಹೋದರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾನೆ.
ಈ ಬಗ್ಗೆ ಧರ್ಮಸ್ಥ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.