ಬ್ಯಾರಿ ನಿಖಾಃ ಹೆಲ್ಪ್ ಲೈನ್ : ಈದ್ ಹಬ್ಬದ ಪ್ರಯುಕ್ತ ಹೊಸ ವಸ್ತ್ರಗಳ ವಿತರಣೆ
Update: 2018-06-03 21:46 IST
ಬಂಟ್ವಾಳ, ಜೂ. 3: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಅಮ್ಮೆಮಾರ್ ಎಂಬಲ್ಲಿ ಇಂದು ಬ್ಯಾರಿ ನಿಖಾಃ ಹೆಲ್ಪ್ ಲೈನ್ ವತಿಯಿಂದ ಹಲವಾರು ಕುಟುಂಬಗಳಿಗೆ ಹೊಸ ವಸ್ತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ತಂಡದ ಕಾರ್ಯದರ್ಶಿ ಮಜೀದ್ ಬಿಕರ್ನಕಟ್ಟೆ "ಶ್ರೀಮಂತ ಹಾಗೂ ಮಧ್ಯಮ ವರ್ಗದ ಜನರು ವಿಜೃಂಭಣೆಯಿಂದ ಈದ್ ಆಚರಿಸುವಾಗ ಆರ್ಥಿಕವಾಗಿ ಅಶಕ್ತರಾದ ಸಮುದಾಯದ ಬಡ ಜನರೂ, ಮಕ್ಕಳೂ ಖುಷಿಯಿಂದ ಈದ್ ಆಚರಿಸಲೆಂದು ಬ್ಯಾರಿ ನಿಖಾಃ ಹೆಲ್ಪ್ ಲೈನ್ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಕಾರ್ಯದರ್ಶಿಗಳಾದ ಆರೀಫ್ ಬಜಾಲ್, ಶರೀಫ್ ಝೈನಿ ಬೊಳ್ಳಾಯಿ, ಖಾಲಿದ್ ಮಂಗಳೂರು ಉಪಸ್ಥಿತರಿದ್ದರು. ಸಮಾಜ ಸೇವಕರಾದ ಖಾದರ್ ಅಮ್ಮೆಮಾರ್, ಅಮೀರ್ ಹಂಝ ಹಾಗೂ ನಬೀಲ್ ಜೊತೆಗಿದ್ದರು.