×
Ad

ಗರ್ಭಿಣಿಗೆ ತುರ್ತು ನೆರವು: ಮಲಾರ್ ಹೆಲ್ಪ್ಲೈನ್‌ನಿಂದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಸನ್ಮಾನ

Update: 2018-06-03 22:26 IST

ಮಂಗಳೂರು, ಜೂ.3: ಪ್ರಸವ ಸಂದರ್ಭ ತುರ್ತಾಗಿ ತನ್ನ ಕಾರಿನಲ್ಲಿ ಮುಸ್ಲಿಂ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ನೆರವು ನೀಡಿದ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ರವಿ ಕುಮಾರ್ ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯನ್ನು ಮೆಚ್ಚಿ ಮಲಾರ್ ಹೆಲ್ಪ್ ಲೈನ್ ವತಿಯಿಂದ ರವಿವಾರ ದೇರಳಕಟ್ಟೆ ಸಮೀಪದ ಮಾಡೂರಿನಲ್ಲಿರುವ ಅವರ ಸ್ವಗೃಹದಲ್ಲೇ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿ ಕುಮಾರ್ ತಾನು ತನ್ನ ಕರ್ತವ್ಯವನ್ನು ನಿಭಾಯಿಸಿದೆ. ನನಗೆ ಅಲ್ಲಿ ಜಾತಿ, ಧರ್ಮ ಮುಖ್ಯವಾಗಲಿಲ್ಲ. ಕರ್ತವ್ಯ ನಿಷ್ಠೆ ಮತ್ತು ಮಾನವೀಯತೆ ಮುಖ್ಯವಾಯಿತು. ಯಾರೇ ಆಗಲಿ ಇಂತಹ ಸಂದರ್ಭದಲ್ಲಿ ನೆರವು ನೀಡುವ ಮನೋಭಾವ ಬೆಳೆಸಬೇಕು. ಇದರಿಂದ ನಮ್ಮ ಮನಸ್ಸಿಗೂ ನೆಮ್ಮದಿ ಸಿಗಲಿದೆ. ನಾನು ಅಂದು ಮಾಡಿದ ನೆರವಿನ ಬಗ್ಗೆ ನನಗೆ ಹಿರಿಯ ಪೊಲೀಸ್ ಅಧಿಕಾರಿಗಳೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಮಲಾರ್ ಹೆಲ್ಪ್‌ಲೈನ್‌ನ ಗೌರವ ನನ್ನ ಸಂತೋಷವನ್ನು ಹೆಚ್ಚಿಸಿದೆ ಎಂದರು.

ಈ ಸಂದರ್ಭ ಮಲಾರ್ ಹೆಲ್ಪ್ಲೈನ್ ಅಧ್ಯಕ್ಷ ಕಬೀರ್ ಮಲಾರ್, ಉಪಾಧ್ಯಕ್ಷ ಅಬ್ದುಸ್ಸಮದ್ ಜಿ. ಅಕ್ಷರನಗರ, ಪ್ರಧಾನ ಕಾರ್ಯದರ್ಶಿ ಶಮೀರ್ ಟಿಪ್ಪುನಗರ, ಉದ್ಯಮಿ ಹನೀಫ್ ಮಲಾರ್, ಎಸ್‌ಡಿಪಿಐ ಪಾವೂರು ಗ್ರಾಮ ಸಮಿತಿಯ ಅಧ್ಯಕ್ಷ ಎಂ.ಕೆ. ಕಮರ್, ಸಂಘಟನೆಯ ಸದಸ್ಯರಾದ ರವೂಫ್ ಆರ್., ನಿಸಾರ್ ಟಿ.ಎಚ್.,ಇರ್ಫಾನ್, ಸಮದ್ ಅಕ್ಷರ ನಗರ, ಜಮಾಲ್ ಮಲಾರ್‌ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News