ಪುತ್ತೂರು : '7ನೇ ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಸ್ಪರ್ಧೆ-2018' ಸಮಾರೋಪ

Update: 2018-06-03 17:26 GMT

ಪುತ್ತೂರು, ಜೂ. 3: ಪುತ್ತೂರು ಚೆಸ್ ಅಕಾಡೆಮಿ ವತಿಯಿಂದ ಶನಿವಾರ ಹಾಗೂ ರವಿವಾರ ನಡೆದ 7ನೇ ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಸ್ಪರ್ಧೆ-2018 ರಲ್ಲಿ ಸಮಗ್ರ ಪ್ರಶಸ್ತಿಯನ್ನು ಕಾಸರಗೋಡು ಜಿಲ್ಲೆಯ ಗಗನ್ ಭಾರದ್ವಾಜ್ ಕೆ. (ಪ್ರ), ಚಿರಾಗ್ ಹಿರಿಂಜ (ದ್ವಿ), ದೇವಿದಾಸ್ ಸುರೇಶ್ ಪೈ (ತೃ), ಆಗಸ್ಟಿನ್ ಎ. (ಚ) ಹಾಗೂ ನಿರಂಜನ್ ರಾಜೀವ್ (ಚ) ಚಾಂಪಿಯನ್‌ಶಿಪ್ ಟ್ರೋಫಿ ಹಾಗೂ ಕ್ರಮವಾಗಿ ಐದು, ನಾಲ್ಕು, ಮೂರು, ಎರಡು ಹಾಗೂ ಒಂದು ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು. ಉತ್ತಮ ಪಿಸಿಎ ಆಟಗಾರನಾಗಿ ಪಿಸಿಎ ದ.ಕ. ಜಿಲ್ಲೆಯ ವತನ್ ಪಿ.ಎಚ್. ಪ್ರಶಸ್ತಿ ಪಡೆದುಕೊಂಡನು.

ಸ್ಪರ್ಧೆಯ ವಿವರ ಇಂತಿದೆ:

ಹುಡುಗರ ವಿಭಾಗ : 15 ವರ್ಷ ವಯೋಮಿತಿ : ಸಾತ್ವಿಕ್ ಶಿವಾನಂದ ಪಿ.ಎಸ್. ಪಿಸಿಎ ದ.ಕ. (ಪ್ರ), ಶಿವ ಚೇತನ್ ಹಳೆಮನೆ ಪಿಸಿಎ ದ.ಕ. (ದ್ವಿ), ಪ್ರಜ್ವಲ್ ನಾಯಕ್ ಉಡುಪಿ (ತೃ)

13 ವರ್ಷ : ಶ್ರೀಗಣೇಶ್ ದ.ಕ. (ಪ್ರ), ಚಿನ್ಮಯ್ ಎಸ್.ಭಟ್ ಉಡುಪಿ (ದ್ವಿ), ಮನ್ವಿತ್ ಕೆ. ಪಿಸಿಎ ದ.ಕ. (ತೃ)
11 ವರ್ಷ : ಧನುಷ್ ರಾಮ್ ಎಂ. ಪಿಸಿಎ ದ.ಕ. (ಪ್ರ), ನಿನಾದ ಎಸ್.ಎ. ಪಿಸಿಎ ದ.ಕ. (ದ್ವಿ), ಶ್ರೀನಿಧಿ ದ.ಕ. (ತೃ)
9 ವರ್ಷ : ಶಾಹುನ್ ಡಿಯೋ ಸಿಕ್ವೇರಾ ದ.ಕ. (ಪ್ರ), ಧೀನರಾಮ್ ಶೆಟ್ಟಿ ದ.ಕ. (ದ್ವಿ), ಆಕಾಂಕ್ಷ್ ಯು.ಡಿ. ದ.ಕ. (ತೃ)
7 ವರ್ಷ : ಆಯುಷ್ ಎಲ್. ರೈ ದ.ಕ (ಪ್ರ)
ಹುಡುಗಿಯರ ವಿಭಾಗ : 15 ವರ್ಷ ವಯೋಮಿತಿ : ಶುಭಪ್ರಧಾ ಕೆ.ಎಸ್. ಪಿಸಿಎ ದ.ಕ. (ಪ್ರ), ಶುಭ ಶ್ರೀ ಕೆ. ಪಿಸಿಎ ದ.ಕ. (ದ್ವಿ), ಸ್ನೇಹಶ್ರೀ ಕೆ.ಪಿ. ಕೂರ್ಗ್ (ತೃ)

13 ವರ್ಷ : ಸಂಹಿತಾ ಶರ್ಮ ಬಿ.ಎಸ್. ಪಿಸಿಎ ದ.ಕ. (ಪ್ರ), ಗಾನ ಸಮೃದ್ಧಿ ಕೆ. ಕಾಸರಗೋಡು (ದ್ವಿ), ಶ್ರೀಯಾನ್ ಎಸ್. ಮಲ್ಯ ದ.ಕ. (ತೃ)
11 ವರ್ಷ : ದಿಶಾ ಯು.ಎ. ಉಡುಪಿ (ಪ್ರ), ಮ್ರಿನಾಲ್ ಮಸ್ಕರೇನಸ್ ದ.ಕ. (ದ್ವಿ), ವಿಂದ್ಯಾ ಪ್ರಭು ಜಿ. ಪಿಸಿಎ ದ.ಕ. (ತೃ)
9 ವರ್ಷ : ಅರುಷಿ ಸೆವೆರಿನ್ ಹೆಲೆನ್ ಡಿ’ಸೋಜ ದ.ಕ. (ಪ್ರ), ಅನಿಖಾ ಯು. ದ.ಕ. (ದ್ವಿ), ಅನಿಸಿಕ ಶ್ರೇಯಾಲ್ ಪಿಂಟೋ ದ.ಕ. (ತೃ)
7 ವರ್ಷ : ಶ್ರದ್ಧಾ ಎಸ್. ರೈ ದ.ಕ. (ಪ್ರ), ತಿಯಾರ ಅಮಂಡ ಗೊನ್ಸಾಲ್ವಿಸ್ ದ.ಕ. (ದ್ವಿ), ರುದ್ರ ರಾಜೀವ್ ದ.ಕ. (ತೃ)

ಸಮಾರಂಭ: ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಪಾಲ್ಗೊಂಡು ಮಾತನಾಡಿ, ಮಕ್ಕಳಲ್ಲಿ ಬುದ್ಧಿಮತ್ತೆಯನ್ನು ಹೆಚ್ಚಿಸುವ ಚೆಸ್ ಸ್ಪರ್ಧೆಯನ್ನು ಇಲ್ಲಿ ನಡೆಸಿರುವುದು ಶ್ಲಾಘನೀಯ. ಈ ಸ್ಪರ್ಧೆಯಲ್ಲಿ ಇನ್ನಷ್ಟು ಮಂದಿ ಪಾಲ್ಗೊಂಡು ತನ್ನಲ್ಲಿರುವ ಪ್ರತಿಭೆಯನ್ನು ಹೊರಹಾಕುವಲ್ಲಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಹೆತ್ತವರ, ಚೆಸ್ ಅಕಾಡೆಮಿಯ ಪ್ರೋತ್ಸಾಹ ಅಗತ್ಯ ಎಂದರು.

ವೇದಿಕೆಯಲ್ಲಿ ಪಿಸಿಎ ನಿರ್ದೇಶಕ ಸತ್ಯಪ್ರಸಾದ್ ಕೋಟೆ, ಅಧ್ಯಕ್ಷ ಜಯರಾಮ ಗೌಡ ಉಪಸ್ಥಿತರಿದ್ದರು. ನ್ಯಾಷನಲ್ ಆರ್ಬಿಟ್ರರ್ ಸಾಕ್ಷಾತ್ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಪಿಸಿಎ ಕಾರ್ಯದರ್ಶಿ ಸತ್ಯನಾರಾಯಣ ಕೋಟೆ ವಂದಿಸಿದರು. ದಿನೇಶ್ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News