ಮೋದಿಯ ‘ಧನಾತ್ಮಕ’ ಹೇಳಿಕೆಯನ್ನು ಸ್ವಾಗತಿಸಿದ ಚೀನಾ

Update: 2018-06-03 17:30 GMT

ಬೀಜಿಂಗ್, ಜೂ. 3: ಜಗತ್ತಿನ ಭವಿಷ್ಯಕ್ಕೆ ಭಾರತ-ಚೀನಾ ಸಹಕಾರ ಪೂರಕವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸಿಂಗಾಪುರದ ವಾರ್ಷಿಕ ಶಾಂಗ್ರಿ-ಲಾ ಮಾತುಕತೆ ವೇದಿಕೆಯಲ್ಲಿ ನೀಡಿರುವ ಹೇಳಿಕೆಯನ್ನು ಚೀನಾ ಸ್ವಾಗತಿಸಿದೆ.

‘‘ಭಾರತ ಮತ್ತು ಚೀನಾಗಳು ಪರಸ್ಪರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಂಬಿಕೆ ಮತ್ತು ಭರವಸೆಯಿಂದ ಜೊತೆಗೂಡಿ ಕೆಲಸ ಮಾಡಿದರೆ ಏಶ್ಯ ಮತ್ತು ಜಗತ್ತು ಉತ್ತಮ ಭವಿಷ್ಯವನ್ನು ಹೊಂದುತ್ತವೆ’’ ಎಂದು ಮೋದಿ ಶಾಂಗ್ರಿ-ಲಾ ಮಾತುಕತೆಯಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಭಾರತೀಯ ಪ್ರಧಾನಿಯ ಈ ಹೇಳಿಕೆಯು ಉಭಯ ದೇಶಗಳ ನಡುವಿನ ಸಂಬಂಧದ ಧನಾತ್ಮಕ ಅಂಶವನ್ನು ಬಿಂಬಿಸುತ್ತದೆ ಎಂದು ಚೀನಾದ ಹಿರಿಯ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಹಿ ಲೀ ಹೇಳಿರುವುದಾಗಿ ಸರಕಾರಿ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News