ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ 9 ವಲಸಿಗರು
Update: 2018-06-03 23:03 IST
ಇಸ್ತಾಂಬುಲ್ (ಟರ್ಕಿ), ಜೂ. 3: ಸ್ಪೀಡ್ ಬೋಟ್ ಒಂದರಲ್ಲಿ ಯುರೋಪ್‌ಗೆ ಪ್ರಯಾಣಿಸುತ್ತಿದ್ದ ಒಂಬತ್ತು ವಲಸಿಗರು ಮೆಡಿಟರೇನಿಯನ್ ಸಮುದ್ರದ ಟರ್ಕಿ ಕರಾವಳಿಯಲ್ಲಿ ರವಿವಾರ ಮುಳುಗಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ವರದಿಗಳು ತಿಳಿಸಿವೆ.
ಟರ್ಕಿಯ ಅಂಟಾಲ್ಯ ಪ್ರಾಂತದ ಡೆಮ್ರ ಜಿಲ್ಲೆಯ ಕರಾವಳಿಯಲ್ಲಿ ದೋಣಿ ಸಮಸ್ಯೆಗೆ ಸಿಲುಕಿತು ಎಂದು ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಅನಡೊಲು ವರದಿ ಮಾಡಿದೆ.
ದುರ್ಘಟನೆಯಲ್ಲಿ 9 ಮಂದಿ ಮುಳುಗಿ ಮೃತಪಟ್ಟರೆ, ಐವರನ್ನು ರಕ್ಷಿಸಲಾಗಿದೆ. ಓರ್ವ ಪ್ರಯಾಣಿಕ ಇನ್ನೂ ಪತ್ತೆಯಾಗಿಲ್ಲ.