ನಿಶ್ಶಸ್ತ್ರೀಕರಣ ಸಾಬೀತಾದ ಬಳಿಕವೇ ದಿಗ್ಬಂಧನ ತೆರವು: ಮ್ಯಾಟಿಸ್

Update: 2018-06-03 17:40 GMT

ಸಿಂಗಾಪುರ, ಜೂ. 3: ಪರಮಾಣು ನಿಶ್ಶಸ್ತ್ರೀಕರಣದ ನಿಟ್ಟಿನಲ್ಲಿ ‘ಹಿಂದೆ ಪಡೆಯಲಾಗದ’ ಕ್ರಮಗಳನ್ನು ತೆಗೆದುಕೊಂಡಿರುವುದನ್ನು ಉತ್ತರ ಕೊರಿಯ ಸಾಬೀತುಪಡಿಸಿದ ನಂತರವಷ್ಟೇ ಅದರ ವಿರುದ್ಧದ ದಿಗ್ಬಂಧನಗಳನ್ನು ತೆರವುಗೊಳಿಸಲಾಗುವುದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಶನಿವಾರ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ಇಲ್ಲಿ ಜೂನ್ 12ರಂದು ನಡೆಯಲು ನಿಗದಿಯಾಗಿರುವ ಶೃಂಗ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಇಲ್ಲಿ ನಡೆದ ಭದ್ರತಾ ಸಮ್ಮೇಳನವೊಂದರಲ್ಲಿ ಮಾತನಾಡಿದ ಮ್ಯಾಟಿಸ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಧಿಸಿರುವ ದಿಗ್ಬಂಧನಗಳನ್ನು ಈ ಹಂತದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News