×
Ad

‘ಜಮೀಯತುಲ್ ಸ-ಅದಾ’ದಿಂದ ಪುಸ್ತಕ ವಿತರಣೆ

Update: 2018-06-04 18:44 IST

ಮಂಗಳೂರು, ಜೂ.4: ನಗರದ ಕುದ್ರೋಳಿಯ ಜಮೀಯತುಲ್ ಸ-ಅದಾ ಅಸೋಸಿಯೇಶನ್ (ಮಾಂಸ ವ್ಯಾಪಾರಸ್ಥರ ಸಂಘ) ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮ ಸೋಮವಾರ ಸಂಘದ ಕಚೇರಿಯಲ್ಲಿ ನಡೆಯಿತು.

ಮಾಂಸ ವ್ಯಾಪಾರಸ್ಥರ ಸಂಘದ ರಾಜ್ಯ ಉಪಾಧ್ಯಕ್ಷ ಅಲಿ ಹಸನ್ ಮಾತನಾಡಿ, 22ನೆ ವಾರ್ಷಿಕ ಪುಸ್ತಕ ವಿತರಣೆ ಕಾರ್ಯಕ್ರಮ ಇದಾಗಿದ್ದು, ಈ ಬಾರಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ 1ರಿಂದ 10ನೆ ತರಗತಿವರೆಗಿನ ಕನ್ನಡ ಮಾಧ್ಯಮ ಶಾಲೆಯ 1 ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು ಎಂದರಲ್ಲದೆ, ಅರ್ಹ ಮಕ್ಕಳಿಗೆ ಪುಸ್ತಕ ವಿತರಣೆ ಔದಾರ್ಯವಲ್ಲ. ಸಂಘದ ಹಕ್ಕಾಗಿದೆ. ಉಚಿತ ಪುಸ್ತಕದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಮುಂದೊಂದು ದಿನ ಸಮಾಜದ ಆಸ್ತಿಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಭಾಷ್ ದಕ್ಕೆ, ಶಂಸುದ್ದೀನ್ ಎಚ್‌ಬಿಟಿ, ಮೊಯ್ದಿನ್ ಮೋನು, ವಸಂತ ಟೈಲರ್ ಮತ್ತಿತರರು ಭಾಗವಹಿಸಿದ್ದರು. ಸಂಘದ ಮುಖಂಡರಾದ ಜೆ. ಅಬ್ದುಲ್ ಖಾದರ್, ಬಶೀರ್, ಇಸ್ಮಾಯೀಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News