ಬೈಕಂಪಾಡಿ: ಅಪರಿಚಿತ ಶವ ಪತ್ತೆ
Update: 2018-06-04 22:18 IST
ಮಂಗಳೂರು ಜೂ. 4: ಬೈಕಂಪಾಡಿ ಹೆದ್ದಾರಿ ಸನಿಹದಲ್ಲಿ ಅಪರಿಚಿತ ಗಂಡಸಿನ ಮೃತ ದೇಹವು ಪತ್ತೆಯಾಗಿದ್ದು, ಪಣಂಬೂರು ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 60 ವರ್ಷ ಪ್ರಾಯದ ಈ ಅಪರಿಚಿತ ವ್ಯಕ್ತಿಯ ಎತ್ತರ-5 ಅಡಿ, ಕಪ್ಪುಮೈ ಬಣ್ಣ, ಕೋಲು ಮುಖ, ಬಡಕಲು ಶರೀರ ಬಿಳಿ ತಲೆ ಕೂದಲು ಹೊಂದಿದ್ದಾರೆ. ಈ ಅಪರಿಚಿತ ಸಂಬಂಧಿಕರು ಇದ್ದಲ್ಲಿ ಪಣಂಬೂರು ಪೊಲೀಸು ಠಾಣೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.