ಕೈರಂಗಳ ಅಲ್ ಅಮೀನ್ ಫ್ರೆಂಡ್ಸ್ ವತಿಯಿಂದ ಪುಸ್ತಕ ವಿತರಣೆ
ಕೊಣಾಜೆ, ಜೂ. 4: ಕೈರಂಗಳದ ಅಲ್-ಅಮೀನ್ ಫ್ರೆಂಡ್ಸ್ ವತಿಯಿಂದ ಶಾಲಾ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಜರುಗಿತು.
ಕಾರ್ಯಕ್ರಮಕ್ಕೆ ಜೆ.ಎಂ.ಆರ್ ಪಡಿಕ್ಕಲ್ ಖತೀಬ್ ನಾಸೀರುದ್ದೀನ್ ಮದನಿ ದುವಾ ಮೂಲಕ ಚಾಲನೆ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಶಿವರಾವ್ ಭಟ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂ. ಸದಸ್ಯ ಹೈದರ್ ಕೈರಂಗಳ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ತೋಟಾಲ್ ಜುಮಾ ಮಸ್ಜಿದ್ ಖತೀಬ್ ಮುಹಿಯ್ಯದ್ದೀನ್ ಸಹದಿ ತೋಟಾಲ್, ನರಿಂಗಾನ ಗ್ರಾಮ ಪಂ. ಸದಸ್ಯ ಮುರಳೀಧರ್ ಶೆಟ್ಟಿ ಮೋರ್ಲ, ಕೈರಂಗಳ ಗ್ರಾಮ ಪಂ. ಸದಸ್ಯ ಲೋಹಿತ್ ವಿ. ಗಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ಅಹ್ಮದ್ ಕುಂಞಿ, ಸಮಾಜ ಸೇವಕ ರಹಿಮಾನ್ ಹೂಹಾಕುವ ಕಲ್ಲು, ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹಿಂ ಪಾರೆ, ಬದ್ರುಲ್ ಹುದಾ ಅಸೋಸಿಯೇಷನ್ ಅಧ್ಯಕ್ಷ ಪೈಝಲ್ ಪಡಿಕ್ಕಲ್, ಅನ್ಸಾರ್ ಪಡಿಕ್ಕಳ್, ಸ್ಥಳೀಯರಾದ ಹೈದರ್ ಮಲಿ, ಶಾಕಿರ್, ಇಬ್ರಾಹಿಂ ಹಾಗೂ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಹಂಝ.ಬಿ ಮತ್ತಿತರು ಉಪಸ್ಥಿತರಿದ್ದರು.
ಕೈರಂಗಳ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿವರಾಮ್ ಭಟ್ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಉಪಾಧ್ಯಕ್ಷ ಜಾಬಿರ್ ತೋಟಾಲ್ ಸ್ವಾಗತಿಸಿದರು. ಶಿನಾನ್ ಕಾರ್ಯಕ್ರಮ ನಿರೂಪಿಸಿದರು.