×
Ad

ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆ

Update: 2018-06-05 18:03 IST

ಮಂಗಳೂರು, ಜೂ.5: ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆಯು ಬ್ಲಾಕ್ ಕಚೇರಿಯಲ್ಲಿ ಅಧ್ಯಕ್ಷ ಜೆ. ಅಬ್ದುಲ್ ಸಲೀಂರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ಪಿ. ದಿನೇಶ್ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಆಭ್ಯರ್ಥಿ ಕೆ.ಕೆ. ಮಂಜುನಾಥ ಅವರನ್ನು ಬಹುಮತದಿಂದ ಗೆಲ್ಲಿಸಲು ಶ್ರಮಿಸಬೇಕು ಎಂದು ಮನವಿ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಗೊಂಡ ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರನ್ನು ಅಭಿನಂಸಿದಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್ ಮಾತನಾಡಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಬೇಕು. ಪಕ್ಷ ಸಂಘಟನೆ ಬಲವಾಗಿದ್ದರೆ ಮಾತ್ರ ಪ್ರತಿಯೊಬ್ಬರಿಗೆ ಎಲ್ಲಾ ರೀತಿಯಲ್ಲಿ ಗೌರವ, ಸ್ಥಾನಮಾನಗಳು ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಮಾತಿಗೆ ಕೂಡಾ ಮನ್ನಣೆ ದೊರೆಯುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್, ರಾಜ್ಯ ಪರಿಶಿಷ್ಠ ಜಾತಿ/ಪಂಗಡದ ಸಂಚಾಲಕ ಟಿ. ಹೊನ್ನಯ್ಯ, ಸುರೇಶ್ ಶೆಟ್ಟಿ, ಬ್ಲಾಕ್ ಉಪಾಧ್ಯಕ್ಷ ಜೆ. ಸದಾಶಿವ ಅಮೀನ್, ದಕ್ಷಿಣ ಬ್ಲಾಕ್ ವಿಧಾನ ಪರಿಷತ್ ಚುನಾವಣಾ ಸಮಿತಿಯ ಅಧ್ಯಕ್ಷ ದಿನೇಶ್ ಬಿ. ರಾವ್, ಮಹಿಳಾ ಕಾಂಗ್ರೆಸಿನ ರಾಜ್ಯ ಕಾರ್ಯದರ್ಶಿ ಅಪ್ಪಿ, ಬ್ಲಾಕ್ ಮಹಿಳಾ ಕಾಂಗ್ರೆಸಿನ ಅಧ್ಯಕ್ಷೆ ನಮಿತಾ ಡಿ. ರಾವ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್, ವನಿತ್ ಕುಮಾರ್, ಪ್ರವಿತ್ರಾ ಕರ್ಕೇರ, ಮನೀಷ್ ರಾಜ್, ಕೋಶಾಧಿಕಾರಿ ಹರೀಶ್ ಕುಂಬ್ಲೆ, ಬ್ಲಾಕ್ ಉಪಾಧ್ಯಕ್ಷೆ, ಮಾಜಿ ಮೇಯರ್ ಜೆಸಿಂತಾ ವಿಜಯ ಅಲ್ಪ್ರೆಡ್, ಮನಪಾ ಸದಸ್ಯರಾದ ಪ್ರಕಾಶ ಅಳಪೆ, ಆಶಾ ಡಿಸಿಲ್ವ, ರತಿಕಲಾ, ಎ.ಸಿ. ವಿನಯರಾಜ್, ಶೈಲಜಾ, ಕವಿತಾ ವಾಸು, ಪದಾಧಿಕಾರಿಗಳಾದ ಹರ್ಬಟ್ ಡಿಸೋಜ, ಅಹಮ್ಮದ್ ಬಾವ ಬಜಾಲ್, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News