ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ
Update: 2018-06-05 21:20 IST
ಶಂಕರನಾರಾಯಣ, ಜೂ.5: ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಯೊಬ್ಬನನ್ನು ಶಂಕರನಾರಾಯಣ ಪೊಲೀಸರು ಪೋಕ್ಸೋ ಕಾಯ್ದೆ ಯಡಿ ಬಂಧಿಸಿದ್ದಾರೆ.
ಬಂಧಿತನನ್ನು ಅಮಾಸೆಬೈಲಿನ ಅಶೋಕ ನಾಯ್ಕ(24) ಎಂದು ಗುರುತಿಸ ಲಾಗಿದೆ. ಈತ 17ರ ಹರೆಯದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದನು. ಈ ಬಗ್ಗೆ ಬಾಲಕಿಯ ತಂದೆ ನೀಡಿದ ದೂರಿನಂತೆ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಶಂಕರನಾರಾಯಣ ಪೊಲೀಸರು ಆರೋಪಿಯನ್ನು ಜೂ.4ರಂದು ಬಂಧಿಸಿದ್ದಾರೆ.
ಆರೋಪಿಯನ್ನು ಇಂದು ಉಡುಪಿ ಜಿಲ್ಲಾ ವಿಶೇಷ ಪೊಕ್ಸೊ ನ್ಯಾಯಾ ಲಯದ ಎದುರು ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಳಿಕ ಆರೋಪಿಯನ್ನು ಮಂಗಳೂರು ಜೈಲಿಗೆ ಕರೆದೊಯ್ಯ ಲಾಯಿತು.