×
Ad

ಭೋಜ ಶೆಟ್ಟಿ ಕೊಲೆ: 12 ಸಾಕ್ಷಿದಾರರ ವಿಚಾರಣೆ

Update: 2018-06-05 21:22 IST

ಉಡುಪಿ, ಜೂ.5: ಹೆಬ್ರಿ ಭೋಜ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆಯು ಎರಡನೆ ದಿನವಾದ ಇಂದು ಕೂಡ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದಲ್ಲಿ ಮುಂದುವರೆದಿದ್ದು, 12 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ಪಡೆದು ಕೊಳ್ಳಲಾಯಿತು.

ನಿನ್ನೆ ಬಿಟ್ಟು ಒಂದು ಹಾಗೂ ಇಂದು 11 ಸಾಕ್ಷಿ ಸೇರಿದಂತೆ ಒಟ್ಟು 12 ಸಾಕ್ಷಿದಾರರನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ವಿಚಾರಣೆಯನ್ನು ನಡೆಸಿದರು. ಜೂ.6ರಂದು ಮತ್ತೆ 10 ಮಂದಿ ಹಾಗೂ ಜೂ.7 ರಂದು 9 ಮಂದಿ ಸಾಕ್ಷದಾರರ ವಿಚಾರಣೆ ನಡೆಯಲಿದೆ.

 ಈ ಸಂದರ್ಭದಲ್ಲಿ ಪ್ರಕರಣ ಆರೋಪಿಗಳಾದ ಈಶ್ವರ ಯಾನೆ ವೀರಮಣಿ, ರಮೇಶ್, ನೀಲಗುಳಿ ಪದ್ಮನಾಭ ಮತ್ತು ಸಂಜೀವ ಕುಮಾರ್ ಹಾಜರಿದ್ದರು. ಕುಂದಾಪುರ ಸರಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಹಾಗೂ ಆರೋಪಿ ಪರ ವಕೀಲರಾದ ಶಾಂತರಾಮ್ ಶೆಟ್ಟಿ ಹಾಗೂ ಅಖಿಲ್ ಹೆಗ್ಡೆ ಉಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News