×
Ad

ಮಂಗಳೂರು: ವಿಕಾಸ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Update: 2018-06-05 22:33 IST

ಮಂಗಳೂರು, ಜೂ. 5; ನಗರದ ವಿಕಾಸ್ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. 

ಡಿಪಾರ್ಟ್‌ಮೆಂಟ್ ಆಫ್ ಫಿಶರೀಸ್ ರಿಸೋರ್ಸಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಇದರ ಮುಖ್ಯಸ್ಥ ಡಾ.ಎಸ್.ಎಂ.ಶಿವಪ್ರಕಾಶ್ ಮಾತನಾಡಿ, ಪ್ರಕೃತಿಯನ್ನು ನಾಶ ಮಾಡಿದರೆ ಮರಳಿ ಪಡೆಯಲು ಅಸಾಧ್ಯ ಎಂದರು. 

ಮುಖ್ಯ ಅತಿಥಿಗಳಾಗಿ ಮಂಗಳೂರು ವಲಯ ಅರಣ್ಯಾಧಿಕಾರಿಗಳಾದ ಪಿ. ಶ್ರೀಧರ್ ಭಾಗವಹಿಸಿದ್ದರು. ಪ್ರಕೃತಿಯ ಮೇಲೆ ದೌರ್ಜನ್ಯವೆಸಗಿದರೆ ಭೂಮಿಯಲ್ಲಿ ನಮ್ಮ ಉಳಿಗೆ ಸಂಚಕಾರವಿದೆ. ಭೂಮಿಯನ್ನು ಗೌರವಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡವನ್ನು ನೆಟ್ಟು ಮುಂದಿನ ಪೀಳಿಗೆಗೆ ಒಳಿತನ್ನು ಮಾಡಬೇಕು ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಮುಖ್ಯಸ್ಥ ಕೃಷ್ಣ ಜೆ ಪಾಲೆಮಾರ್‌ಅವರು, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಮಂಗಳೂರಿನ ಸುಮಾರು 50 ಶಾಲೆಗಳ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆಶಯವನ್ನು ಅವರು ವ್ಯಕ್ತಪಡಿಸಿದರು. 

ವೇದಿಕೆಯಲ್ಲಿ ವಿಕಾಸ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಜೆ. ಕೊರಗಪ್ಪ, ಸಂಚಾಲಕ ಡಾ. ಡಿ ಶ್ರೀಪತಿರಾವ್, ವಿಕಾಸ್ ಎಜ್ಯೂ ಸೊಲ್ಯುಷನ್ ನಿರ್ದೇಶಕ ಡಾ.ಅನಂತ್‌ಪ್ರಭು ಜಿ., ವಿಕಾಸ್ ವಿದ್ಯಾಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಪ್ರಾಂಶುಪಾಲ ಟಿ. ರಾಜಾರಾಮ್ ರಾವ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರುತಿ ಎಸ್. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News