×
Ad

ಮಂಗಳೂರು ಏರ್‌ಪೋರ್ಟ್ ರನ್‌ವೇ ತಡೆಗೊಡೆ ಕುಸಿತ

Update: 2018-06-05 23:19 IST

ಮಂಗಳೂರು, ಜೂ. 5: ಕಳೆದ ವಾರ ನಗರದಲ್ಲಿ ಸುರಿದಿದ್ದ ಭಾರೀ ಮಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ತಡೆಗೊಡೆ ಬಳಿ ಭೂಕುಸಿತ ಕಂಡುಬಂದಿದೆ.

ಮೇ 29ರಂದು ಸುರಿದಿದ್ದ ಭಾರೀ ಮಳೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯ ಒಂದು ಪಾರ್ಶ್ವದ ತಡೆಗೊಡೆ ಬಳಿ ಭೂ ಕುಸಿತ ಉಂಟಾಗಿ ರನ್ ಕುಸಿಯುವ ಭೀತಿ ಉಂಟಾಗಿದೆ. ಅಲ್ಲದೆ, ಭೂ ಕುಸಿತದಿಂದ ರನ್ ವೇ ತಡೆಗೋಡೆ ಬಿರುಕು ಬಿಟ್ಟಿದೆ.

ಸ್ಥಳಕ್ಕೆ  ಅಧಿಕಾರಿಗಳು ಭೇಟಿ

ಸ್ಥಳಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿತಪ್ಪು ಮಾಹಿತಿಗಳು ನೀಡಲಾಗಿದೆ. ಇಂತಹ ತಪ್ಪು ಸಂದೇಶಗಳನ್ನು ನಂಬದಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News