ಮಂಗಳೂರು: ಗೋದಾಮಿಗೆ ನುಗ್ಗಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಕಳವು
ಮಂಗಳೂರು, ಜೂನ್ 5: ನಗರದ ಹೊರವಲಯದ ಉಳಾಯಿಬೆಟ್ಟು ಗ್ರಾಮದ ಕುಟಿನ್ಹೋಪದವು ಎಂಬಲ್ಲಿ ಗೋದಾಮಿಗೆ ನುಗ್ಗಿದ ಕಳ್ಳರು ಗೋದಾಮಿನಲ್ಲಿದ್ದ ಸುಮಾರು 1.55 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳವು ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ನೀರುಮಾರ್ಗದ ಓಷಿಯನ್ ಮ್ಯೂಸಿಕ್ ಎಂಬ ಎಲೆಕ್ಟ್ರಾನಿಕ್ಸ್ ಅಂಗಡಿಯ ಎಲೆಕ್ಟ್ರಿಕಲ್ ವಸ್ತುಗಳನ್ನು ಕುಟಿನ್ಹೋಪದವು ಎಂಬಲ್ಲಿ ಕುಟಿನ್ಹೋ ಪದವು ಕಾಂಪ್ಲೆಕ್ಸ್‌ನ ಗೋದಾಮಿನಲ್ಲಿರಿಸಲಾಗಿತ್ತು. ಸೋಮವಾರ ಸಂಜೆ 4 ಗಂಟೆಗೆ ಕೆಲಸಗಾರರಾದ ನಿತಿನ್ ಹಾಗೂ ಪುರುಷೋತ್ತಮ ಎಂಬವರು ಬಂದು ಕೆಲವು ಅಗತ್ಯ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಗೋದಾಮಿನಿಂದ ತೆಗೆದು ಬಳಿಕ ಗೋದಾಮಿಗೆ ಶಟರ್ ಎಳೆದು ಬೀಗ ಹಾಕಿ ಭದ್ರಪಡಿಸಿ ಹೋಗಿದ್ದರು. ಆದರೆ ಮಂಗಳವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಕೆಲಸಗಾರ ನಿತಿನ್ ಗೋದಾಮಿಗೆ ಬಂದಾಗ ಗೋದಾಮಿನ ಶಟರನ್ನು ಆಯುಧವನ್ನು ಬಳಸಿ ಬೀಗವನ್ನು ತುಂಡರಿಸಿದ್ದು ಗಮನಕ್ಕೆ ಬಂದಿತ್ತು. ಗೋದಾಮಿನ ಒಳಗೆ ಹೋಗಿ ನೋಡಿದಾಗ ಸುಮಾರು 65,000 ರೂ. ಮೌಲ್ಯದಎಲೆಕ್ಟ್ರಿಕಲ್ ವಸ್ತುಗಳು, ಸುಮಾರು 45,000 ರೂ. ಮೌಲ್ಯದ ಆಂಪ್ಲಿಯರ್ ಹಾಗೂ ಸುಮಾರು 45,000 ರೂ. ಮೌಲ್ಯದ ವಯರ್‌ಗಳನ್ನು ಕಳವು ಆಗಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.