×
Ad

ಜಂಟಿ ಸಮರಾಭ್ಯಾಸದಲ್ಲಿ ಭಾರತ, ಪಾಕ್ ಪಾಲು

Update: 2018-06-05 23:36 IST

ಬೀಜಿಂಗ್, ಜೂ. 5: ರಶ್ಯದಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ಜಂಟಿ ಸಮರಾಭ್ಯಾಸದಲ್ಲಿ ಭಾರತ ಮತ್ತು ಪಾಕಿಸ್ತಾನಿ ಸೇನೆಗಳು ಪಾಲ್ಗೊಳ್ಳಲಿವೆ. ಈ ಜಂಟಿ ಸಮರಾಭ್ಯಾಸವು ನೆರೆ ದೇಶಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಬಹುದು ಹಾಗೂ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಕಿರೀಟಕ್ಕೆ ಇನ್ನೊಂದು ಗರಿಯಾಗಬಹುದು ಎಂದು ಚೀನೀ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಮರಾಭ್ಯಾಸದಲ್ಲಿ ಚೀನಾ ಮತ್ತು ರಶ್ಯ ಸೇರಿದಂತೆ ಇತರ ಆರು ದೇಶಗಳೂ ಭಾಗವಹಿಸಲಿವೆ.

ಸಮರಾಭ್ಯಾಸದ ವೇಳೆ ಭಾರತ ಮತ್ತು ಪಾಕಿಸ್ತಾನಿ ಸೇನೆಗಳ ಮುಖ್ಯಸ್ಥರ ಭೇಟಿಗೂ ಅವಕಾಶವನ್ನು ಕಲ್ಪಿಸಬಹುದಾಗಿದೆ.

ಸ್ವಾತಂತ್ರ್ಯದ ಬಳಿಕ, ಭಾರತ ಮತ್ತು ಪಾಕಿಸ್ತಾನಗಳು ಜಂಟಿ ಸಮರಾಭ್ಯಾಸವೊಂದರಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News