ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ ಎಂದ ಶಿವಸೇನೆ

Update: 2018-06-06 11:30 GMT

ಮುಂಬೈ, ಜೂ.6: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ತಳ್ಳಿಹಾಕಿರುವ ಶಿವಸೇನೆ ಸ್ವತಂತ್ರವಾಗಿ 2019ರ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದಿದೆ.

ಇತ್ತೀಚಿನ ಪಾಲ್ಘರ್ ಉಪಚುನಾವಣೆಯಲ್ಲಿ ಪಕ್ಷದ ಪ್ರದರ್ಶನವನ್ನು ಉಲ್ಲೇಖಿಸಿರುವ ಶಿವಸೇನೆಯ ಮುಖವಾಣಿ ‘ಸಾಮ್ನಾ’ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ‘ಪೋಸ್ಟರ್ ಬಾಯ್’ (ಪ್ರಧಾನಿ ಮೋದಿಯನ್ನು ಉಲ್ಲೇಖಿಸಿ) ನ ಅಗತ್ಯವಿಲ್ಲ ಎನ್ನುವುದನ್ನು ಚುನಾವಣೆಯ ಫಲಿತಾಂಶವು ತಿಳಿಸಿದೆ ಎಂದು ಹೇಳಿದೆ.

“ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿನ ಸೋಲಿನ ಬಳಿಕ ಬಿಜೆಪಿಯು ‘ಸಂಪರ್ಕ’ ಅಭಿಯಾನವನ್ನೇಕೆ ಮಾಡುತ್ತಿದೆ. ಶಿವಸೇನೆಯು ತನ್ನ ಸಾಮರ್ಥ್ಯದಿಂದಲೇ 2019ರ ಚುನಾವಣೆಯಲ್ಲಿ ಸ್ಪರ್ಧಿಸಲಿದೆ” ಎಂದು ಸಂಪಾದಕೀಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News