×
Ad

ನೂತನ ಸಚಿವ ಯು.ಟಿ.ಖಾದರ್ ಗೆ ಸನ್ಮಾನ

Update: 2018-06-06 20:00 IST

ಬೆಂಗಳೂರು, ಜೂ. 6: ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ನೂತನ ಸಂಪುಟ ದರ್ಜೆಯ ಸಚಿವರಾಗಿ ರಾಜಭವನದಲ್ಲಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನು ಅವರ ನಿವಾಸ ಜಯಮಹಲ್ ಗೆ ಮಂಗಳೂರಿನ ಯುವಕರ ನಿಯೋಗ ತೆರಳಿ ಸನ್ಮಾನಿಸಿದರು.

ದ.ಕ.ಜಿಲ್ಲಾ ವಕ್ಫ್ ಸದಸ್ಯ ರಶೀದ್ ವಿಟ್ಲ, ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ಹನೀಫ್ ಟಿ.ಎಚ್.ಎಂ.ಎ., ಅನ್ಸಾರ್ ಬೆಳ್ಳಾರೆ, ಎಂ.ಎಂ.ವೈ.ಸಿ. ಸ್ಥಾಪಕ ಜುನೈದ್ ಪಿ.ಕೆ., ಕ.ರ.ವೇ. ಸ್ವಾಭಿಮಾನಿ ಬಳಗ ಬೆಂಗಳೂರು ನಗರ ಯುವ ಘಟಕದ ಉಪಾಧ್ಯಕ್ಷ ಅಬೂಬಕರ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಾದಿಕ್ ಬರೆಪ್ಪಾಡಿ, ಯು.ಟಿ.ಖಾದರ್ ಅಭಿಮಾನಿ ಬಳಗ ಬೆಂಗಳೂರು ಇದರ ಅಧ್ಯಕ್ಷ ಅಶ್ರಫ್ ಬೋಳಂತೂರು, ವಿಟ್ಲ ಟೌನ್ ಮಸೀದಿಯ ಜತೆ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಅಡ್ಡದಬೀದಿ, ಮೋನು ಪಾರೆ ಮೇಗಿನಪೇಟೆ ಇವರು ಜೊತೆಗೂಡಿ ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News