×
Ad

ಸಮಾಜ ವಿಜ್ಞಾನ ಪಠ್ಯದ ಅಧ್ಯಾಯ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ

Update: 2018-06-07 12:32 IST

ಮಂಗಳೂರು, ಜೂ.7: ರಾಜ್ಯದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಅಧ್ಯಾಯವನ್ನು ಕೈ ಬಿಡುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ -ಬಜರಂಗ ದಳವು ಗುರುವಾರ ನಗರದ ಜ್ಯೋತಿ ಸಮೀಪದ ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್ ಯಾವ ಕಾರಣಕ್ಕೂ ಈ ಪಠ್ಯದಲ್ಲಿರುವ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮೀರಿಗೆ ಸಂಬಂಧಿಸಿದ ಅಧ್ಯಾಯ ಇರಬಾರದು. ತಕ್ಷಣ ಇದನ್ನು ಕೈ ಬಿಟ್ಟು ಹೊಸ ಮುದ್ರಿತ ಪಠ್ಯವನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ದುರ್ಗಾ ವಾಹಿನಿಯ ನಾಯಕಿ ಆಶಾ ಜಗದೀಶ್, ಬಜರಂಗ ದಳದ ಪ್ರಮುಖರಾದ ಶಿವಾನಂದ ಮೆಂಡನ್, ಪ್ರಮೋದ್ ಪಂಪ್‌ವೆಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News