×
Ad

ಮೂಡುಬಿದಿರೆ : ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಮರಕ್ಕೆ ಢಿಕ್ಕಿ

Update: 2018-06-07 18:38 IST

ಮೂಡುಬಿದಿರೆ, ಜೂ. 7: ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮರವು ಧರೆಗುರುಳಿದ್ದು, ಚಾಲಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಮಿಜಾರಿನ ಬಂಗಬೆಟ್ಟು ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಎಡಪದವಿನ  ಟಿಪ್ಪರ್ ಲಾರಿಯು ಬಂಗಬೆಟ್ಟು ಶಾಲೆಯ ಕ್ರಾಸ್ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆಯಿದ್ದ ಮಾವಿನ ಮರಕ್ಕೆ ಢಿಕ್ಕಿ ಹೊಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಮರವು ಬೇರು ಸಹಿತ ಧರೆಗುರುಳಿದೆ ಹಾಗೂ ಟಿಪ್ಪರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News