ಜೂ.10: ರಾಜಾ ಕಾಲುವೆ ಅತಿಕ್ರಮಣ ತೆರವಿಗೆ ಒತ್ತಾಯಿಸಿ ಪ್ರತಿಭಟನೆ
ಮಂಗಳೂರು, ಜೂ. 7: ಇತ್ತೀಚೆಗೆ ಸುರಿದ ಮಳೆಗೆ ಮಂಗಳೂರು ತತ್ತರಗೊಳ್ಳಲು ನೀರು ಹರಿಯುವ ಚರಂಡಿ, ರಾಜಾ ಕಾಲುವೆಗಳ ಅತಿಕ್ರಮಣ, ಅವೈಜ್ಞಾನಿಕವಾಗಿ ಹೊಸ ಲೇಔಟ್ ಗಳನ್ನು ನಿರ್ಮಿಸಿರುವುದು ಪ್ರಧಾನ ಕಾರಣವಾಗಿದೆ. ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿರುವ ಕೊಟ್ಟಾರ ಚೌಕಿ, ಬಂಗ್ರ ಕೂಳೂರು, ಕೋಡಿಕಲ್, ಕೂಳೂರು ಪ್ರದೇಶದಲ್ಲಿ ನೀರು ಹರಿಯುವ ಬೃಹತ್ ರಾಜಕಾಲುವೆಯನ್ನು ರಿಯಲ್ ಎಸ್ಟೇಟ್, ಬಿಲ್ಡರ್ ಲಾಬಿಗಳ ಸಹಿತ ಬಲಾಢ್ಯರು ಅತಿಕ್ರಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಡಿವೈಎಫ್ಐ ಕೂಳೂರು ವಿಭಾಗ ಸಮಿತಿ ರಾಜಾಕಾಲುವೆ, ಚರಂಡಿಗಳ ಅತಿಕ್ರಮಣ ತೆರವಿಗೆ ಒತ್ತಾಯಿಸಿ ಜೂನ್ 10 ರಂದು ಬಂಗ್ರಕೂಳೂರು ಫೋರ್ತ್ ಮೈಲ್ ಬಳಿಯ ರಾಜಾಕಾಲುವೆ ಮುಂಭಾಗ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಕುರಿತು ವರ್ಷದ ಹಿಂದೆ ಸ್ಥಳೀಯ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಡಿವೈಎಫ್ಐ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿತ್ತು. ತಹಶೀಲ್ದಾರ್ ನೇತೃತ್ವದ ಸಮಿತಿ ರಾಜಾಕಾಲುವೆ ಅತಿಕ್ರಮಣವನ್ನು ಧೃಢಪಡಿಸಿ ವರದಿ ನೀಡಿತ್ತು. ಆದರೂ ಜಿಲ್ಲಾಡಳಿತ ಕ್ರಮಕೈಗೊಳ್ಳದ ಕಾರಣ ಈ ಬಾರಿ ಮಳೆಗಾಲದ ಆರಂಭದಲ್ಲೆ ಅತಿ ಹೆಚ್ಚು ಹಾನಿ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ಅಪಾರ ನಷ್ಟ ಅನುಭವಿಸಿದ್ದಾರೆ. ಈ ಅತಿಕ್ರಮಣಗಳನ್ನು ತೆರವುಗೊಳಿಸದಿದ್ದಲ್ಲಿ ಮುಂದಕ್ಕೆ ಮತ್ತಷ್ಟು ಅನಾಹುತಗಳು ಸಂಭವಿಸುವ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಡಿವೈಎಫ್ಐ ಕೂಳೂರು ವಿಭಾಗ ಸಮಿತಿ ರಾಜಾಕಾಲುವೆ, ಚರಂಡಿಗಳ ಅತಿಕ್ರಮಣ ತೆರವಿಗೆ ಒತ್ತಾಯಿಸಿ ಜೂನ್ 10 ರಂದು ಬಂಗ್ರಕೂಳೂರು ಫೋರ್ತ್ ಮೈಲ್ ಬಳಿಯ ರಾಜಾಕಾಲುವೆ ಮುಂಭಾಗ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಂಡಿದೆ ಎಂದು
ಚರಣ್ ಶೆಟ್ಟಿ ಪಂಜಿಮೊಗರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.