ಕಡಬ: ಯುವತಿ ನಾಪತ್ತೆ
Update: 2018-06-07 21:34 IST
ಕಡಬ, ಜೂ. 7: ಕೆಲಸಕ್ಕೆಂದು ತೆರಳಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ಕಡಬ ಠಾಣೆ ವ್ಯಾಪ್ತಿಯ ಬಲ್ಯದಲ್ಲಿ ನಡೆದಿದೆ.
ನಾಪತ್ತೆಯಾಗಿರುವ ಯುವತಿಯನ್ನು ಬಲ್ಯ ಗ್ರಾಮದ ದೇರಾಜೆ ಪನ್ಯಾಡಿ ನಿವಾಸಿ ದಿ. ಗುರುವ ಎಂಬವರ ಪುತ್ರಿ ಸುಂದರಿ (30) ಎಂದು ಗುರುತಿಸಲಾಗಿದೆ.
ಕೂಲಿ ಕೆಲಸ ಮಾಡುತ್ತಿದ್ದ ಈಕೆ ಕಳೆದ ಸುಮಾರು ಒಂದು ತಿಂಗಳ ಹಿಂದೆ ಕೆಲಸಕ್ಕೆಂದು ತೆರಳಿದ್ದು, ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಈಕೆಯ ತಾಯಿ ಚೋಮು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.