×
Ad

ತಾಲಿಬಾನ್ ಜೊತೆ ಒಂದು ವಾರದ ಈದ್ ಯುದ್ಧವಿರಾಮ :ಅಫ್ಘಾನ್ ಘೋಷಣೆ

Update: 2018-06-07 21:43 IST
ಸಾಂದರ್ಭಿಕ ಚಿತ್ರ

ಕಾಬೂಲ್, ಜೂ. 7: ಈದ್ ಹಬ್ಬದ ಸಂದರ್ಭದಲ್ಲಿ ತಾಲಿಬಾನ್‌ನೊಂದಿಗೆ ಒಂದು ವಾರದ ಯುದ್ಧವಿರಾಮ ಆಚರಿಸಲಾಗುವುದು ಎಂದು ಅಫ್ಘಾನಿಸ್ತಾನ ಗುರುವಾರ ಘೋಷಿಸಿದೆ.

ಆದಾಗ್ಯೂ, ಐಸಿಸ್ ಸೇರಿದಂತೆ ಇತರ ಭಯೋತ್ಪಾದಕ ಗುಂಪುಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ.

‘‘ರಮಝಾನ್ ತಿಂಗಳ 27ನೇ ದಿನದಿಂದ ಈದುಲ್ ಫಿತ್ರ್‌ನ ಐದನೇ ದಿನದವರೆಗೆ ಯುದ್ಧವಿರಾಮ ಜಾರಿಯಲ್ಲಿರುವುದು’’ ಎಂದು ಅಧ್ಯಕ್ಷ ಅಶ್ರಫ್ ಘನಿ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಅಂದರೆ, ಯುದ್ಧವಿರಾಮವು ಜೂನ್ 12ರಿಂದ 19ರವರೆಗೆ ಜಾರಿಯಲ್ಲಿರುತ್ತದೆ.

ಯುದ್ಧವಿರಾಮಕ್ಕೆ ತಾಲಿಬಾನ್ ಒಪ್ಪಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಈ ಘೋಷಣೆಯ ಬಗ್ಗೆ ನಾಯಕರೊಂದಿಗೆ ವಿಚಾರಿಸುತ್ತಿದ್ದೇವೆ ಎಂದು ತಾಲಿಬಾನ್ ವಕ್ತಾರನೊಬ್ಬ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದ್ದಾನೆ.

ಮಸೀದಿಯಲ್ಲಿ ಪ್ರಾರ್ಥಿಸುತ್ತಿದ್ದ ನಾಲ್ವರ ಹತ್ಯೆ

ಅಫ್ಘಾನಿಸ್ತಾನದ ಪೂರ್ವದ ಖೋಸ್ತ್ ಪ್ರಾಂತದಲ್ಲಿ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ನಾಲ್ವರನ್ನು ಭಯೋತ್ಪಾದಕರು ಗುಂಡು ಹಾರಿಸಿ ಕೊಂದಿದ್ದಾರೆ.

ಮಂಡೊ ಝಾಯಿ ಜ್ಲಿಲೆಯ ಮಸೀದಿಯಲ್ಲಿ ಬುಧವಾರ ಮಧ್ಯಾಹ್ನ ಪ್ರಾರ್ಥನೆ ಸಲ್ಲಿಸುತ್ತಿದ್ದ 15ಕ್ಕೂ ಅಧಿಕ ಜನರ ಮೇಲೆ ಭಯೋತ್ಪಾದಕರು ಕಾರೊಂದರಿಂದ ಗುಂಡು ಹಾರಿಸಿದರು ಎಂದು ಪ್ರಾಂತದ ಗವರ್ನರ್‌ರ ವಕ್ತಾರ ತಾಲಿಬ್ ಮಂಗಲ್ ತಿಳಿಸಿದರು.

ಈ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News