ನಂದಿಕೂರು: ಸಾರ್ವಜನಿಕ ಅಹವಾಲು ಆಲಿಕೆ ಸಭೆ ರದ್ದು
Update: 2018-06-07 21:56 IST
ಉಡುಪಿ, ಜೂ.7: ಅದಾನಿ ಸಿಮೆಂಟೇಶನ್ ಲಿಮಿಟೆಡ್ ಕಂಪನಿ ಎಲ್ಲೂರು ಗ್ರಾಮದ ಕೆಐಎಡಿಬಿ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿರುವ ಸಿಮೆಂಟ್ ಗ್ರೈಂಡಿಂಗ್ ಘಟಕದ ಕುರಿತು ಜೂನ್ 15ರಂದು ಆಯೋಜಿಸಿದ್ದ ಪರಿಸರ ಸಾರ್ವಜನಿಕ ಅಹವಾಲು ಆಲಿಕೆ ಸಭೆಯನ್ನು ರದ್ದುಪಡಿಸಲಾಗಿದೆ.
ಕೈಗಾರಿಕೆಯ ಪ್ರವರ್ತಕರು ಹಾರುಬೂದಿಯು ಧೀರ್ಘಾವಧಿಯಲ್ಲಿ ಲಭ್ಯತೆಯಿಲ್ಲದ ಕಾರಣ, ಉದ್ದೇಶಿತ ಯೋಜನೆಯನ್ನು ಸದ್ಯಕ್ಕೆ ಕೈಬಿಡಲಾಗಿದ್ದು, ಈ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಪರಿಸರ ಅಧಿಕಾರಿಗಳು, ಕರಾಮಾನಿಮಂ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.