×
Ad

ಇನ್‌ಸ್ಫಾಯರ್ ಅವಾರ್ಡ್‌ಗೆ ಅರ್ಜಿ ಆಹ್ವಾನ

Update: 2018-06-07 22:03 IST

 ಉಡುಪಿ, ಜೂ.7: 2018-19ನೇ ಸಾಲಿನಲ್ಲಿ 6ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 10ರಿಂದ 15 ವಷ ವಯಸ್ಸಿನ ವಿದ್ಯಾರ್ಥಿಗಳು ‘ಇನ್‌ಸ್ಫಾಯರ್ ಅವಾರ್ಡ್’ ಯೋಜನೆ ಅಡಿಯಲ್ಲಿ ಆನ್‌ಲೈನ್ ನಾಮಿನೇಷನ್ ಸಲ್ಲಿಸಲು ಜೂ.30 ಕೊನೆಯ ದಿನವಾಗಿದೆ.

ಜಿಲ್ಲೆಯ ನೊಂದಾಯಿತ ಎಲ್ಲಾ ಸರಕಾರಿ/ಅನುದಾನಿತ/ ಅನುದಾನ ರಹಿತ ಶಾಲಾ ಮುಖ್ಯಸ್ಥರು ಈ ಬಗ್ಗೆ ಕೂಡಲೇ ಗಮನಹರಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ನಾಮಿನೇಷನ್ ಮಾಡಲು ಕ್ರಮ ವಹಿಸುವಂತೆ ಉಪನಿರ್ದೇಶಕರು (ಅಭಿವೃದ್ಧಿ), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News