ಮದರಸ ಪಬ್ಲಿಕ್ ಪರೀಕ್ಷೆ: ಅಲ್-ಅರ್ಹರಿಯಾ ಕೇಂದ್ರ ಮಸೀದಿಗೆ ಶೇ. 100 ಫಲಿತಾಂಶ

Update: 2018-06-08 13:03 GMT

ಮಂಗಳೂರು, ಜೂ. 8 2017-2018ರ ಸಾಲಿನಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 5ನೇ 7ನೇ ಮತ್ತು 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಹಾಜರಾದ ಮಂಗಳೂರಿನ ಅಲ್-ಅರ್ಹರಿಯಾ ಮದರಸದ ಎಲ್ಲಾ ವಿದ್ಯಾರ್ಥಿಗಳು ಪಾಸಾಗುವುದರೊಂದಿಗೆ ಶೇ 100 ಫಲಿತಾಂಶವನ್ನು ದಾಖಾಲಿಸಿದ್ದಾರೆ.

ಪಬ್ಲಿಕ್ ಪರೀಕ್ಷೆಗೆ ಹಾಜರಾದವರ ಪೈಕಿ 7ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲಿ ಪಾಸಾಗಿರುತ್ತಾರೆ. ಅದರಂತೆ 5ನೇ ತರಗತಿಯ 7 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲು ಸಂಸ್ಥೆಯ ಮೂರು ತರಗತಿಗಳ ಒಟ್ಟು ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ ಎಂದು ಅಲ್-ಅರ್ಹರಿಯಾ ಮದರಸ ಸಂಸ್ಥೆಯ ಅದ್ಯಕ್ಷರಾದ ಹಾಜಿ ವೈ ಮುಹಮ್ಮದ್ ಕುಂಞಿಯವರು ತಿಳಿಸಿರುತ್ತಾರೆ.

ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ಕಾರಣೀಭೂತರಾದ ಇಸ್ಮಾಯಿಲ್ ಸಖಾಫಿ, ಬಶೀರ್ ಮದನಿ, ಅಬ್ದುಲ್ ಖಾದರ್ ಪೈಝಿ ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಅಲ್-ಅರ್ಹರಿಯ್ಯ ಆಡಳಿತ ಸಮಿತಿ ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News