×
Ad

ತಬ್ಲಿಗಿ ಜಮಾಅತ್ ನಾಯಕ ಮೌಲಾನ ಗಝಾಲಿ ನಿಧನ

Update: 2018-06-08 19:29 IST

ಭಟ್ಕಳ, ಜೂ. 8: ಇಲ್ಲಿನ ತಬ್ಲಿಗಿ ಜಮಾಅತ್ ನ ಮುಂಚೂಣಿಯ ನಾಯಕರಲ್ಲೋರ್ವರಾಗಿದ್ದ ಮೌಲಾನ ಗಝಾಲಿ ಖತೀಬ್ ನದ್ವಿ (74) ಶುಕ್ರವಾರ ತಮ್ಮ ಸ್ವಗೃಹ ಮುಗ್ಲಿಹೊಂಡಿ (ಪುರವರ್ಗದಲ್ಲಿ) ನಿಧನರಾದರು.

ಅವರು ರಮಝಾನ ತಿಂಗಳ ಉಪವಾಸಾಚರಣೆಯ ಬೆಳಗಿನ ಪಾರಣೆ ಮುಗಿಸಿ ಫರ್ರ್ ನಮಾರ್ ನಿರ್ವಹಿಸಲು ಅಣಿಯಗುತ್ತಿದ್ದಂತೆ ನಿಧನರಾದರೆಂದು ಕುಟುಂಬ ಮೂಲಗಳು ತಿಳಿಸಿವೆ.

ಮೌಲಾನ ಗಝಾಲಿ ತಬ್ಲಿಗಿ ಜಮಾಅತ್ ಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದು, ಅಂಜುಮನ್ ಶಾಲೆಯಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿ ನಂತರ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ವಿದ್ವಾಂಸ ಪದವಿಯನ್ನು ಪಡೆದುಕೊಂಡಿದ್ದರು. ಅವರು 1967 ರಿಂದಲೇ ಜಮಾಅತ್ ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ದೆಹಲಿಯ ತಬಲಿಗಿ ಜಮಾಅತ್ ನ ಕೇಂದ್ರವಾಗಿ ನಿಝಾಮುದ್ದೀನ್ ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಅರಬಿಕ್, ಇಂಗ್ಲಿಷ್ ಹಾಗೂ ಉರ್ದು ಭಾಷೆಗಳನ್ನು ಚೆನ್ನಾಗಿ ಬಲ್ಲ ಇವರು ಧರ್ಮ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು. ಇವರು ಪತ್ನಿ, 9 ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಇವರ ಜನಾಝ ನಮಾಝನ್ನು ಜಾಮಿಯಾ ಮಸೀದಿಯಲ್ಲಿ ನಿರ್ವಹಿಸಿ ಖಾಝೀಯಾ ಸ್ಟ್ರೀಟ್ ನಲ್ಲಿರುವ ಖಬರಸ್ಥಾನದಲ್ಲಿ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News