×
Ad

ನೆಕ್ಕಿಲಾಡಿ: 'ಕುರ್ ಆನ್ ಒಂದು ಚಿಂತನೆ' ಕಿರುಕೃತಿ ಬಿಡುಗಡೆ

Update: 2018-06-08 19:39 IST

ನೆಕ್ಕಿಲಾಡಿ, ಜೂ. 8: ರಮಝಾನ್ ತಿಂಗಳಲ್ಲಿ ಅವತೀರ್ಣಗೊಂಡ ಪವಿತ್ರ ಕುರ್ ಆನ್ ನ ಸಮಗ್ರ ಪರಿಚಯ ಹಾಗೂ  ಪ್ರಶ್ನೋತ್ತರಗಳನ್ನೊಳಗೊಂಡ 'ಕುರ್ ಆನ್ ಒಂದು ಚಿಂತನೆ' ಎಂಬ ಕಿರು ಕೃತಿಯನ್ನು ನೆಕ್ಕಿಲಾಡಿ ಮಸ್ಜಿದುಲ್ ಹುದಾದಲ್ಲಿ ಶುಕ್ರವಾರ ಜುಮಾ ನಮಾಝ್ ಬಳಿಕ ಬಿಡುಗಡೆ ಮಾಡಲಾಯಿತು.

ವಾರ್ತಾಭಾರತಿಯ ನಿರ್ದೇಕರಾದ ಅಲಿ ದಾವೂದ್ ರಿಗೆ ಪುಸ್ತಕದ ಪ್ರತಿ ನೀಡುವ ಮೂಲಕ ಜಮಾಅತೆ ಇಸ್ಲಾಮೀ ದ.ಕ. ಜಿಲ್ಲಾ ಸಂಂಚಾಲಕರಾದ ಅಮೀನ್ ಅಹ್ಸನ್ ಪುಸ್ತಕ ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಜ.ಇ. ಸ್ಥಾನೀಯ ಅಧ್ಯಕ್ಷ ಯು.ಕೆ. ಇಲ್ಯಾಸ್ ಹಾಗೂ ಕವಿ ಜಲೀಲ್ ಮುಕ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News