×
Ad

ಚುನಾವಣೆ: ದ.ಕ ಜಿಲ್ಲೆಯಲ್ಲಿ ಪದವಿಧರರ ಕ್ಷೇತ್ರದಲ್ಲಿ ಶೇ .64.61, ಶಿಕ್ಷಕರ ಕ್ಷೇತ್ರದಲ್ಲಿ ಶೇ 76.16 ಮತದಾನ

Update: 2018-06-08 20:49 IST

ಮಂಗಳೂರು, ಜೂ. 8: ಕರ್ನಾಟಕ ನೈರುತ್ಯ ವಿಧಾನ ಪರಿಷತ್ ಪದವಿಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಜೂನ್ 8ರಂದು ಬೆ.7ರಿಂದ ಸಂಜೆ 5ರವರೆಗೆ ಜಿಲ್ಲೆಯಲ್ಲಿ ಒಟ್ಟು 37 ಮತದಾನ ಕೇಂದ್ರದಲ್ಲಿ ನಡೆದ ಚುನಾವಣೆಯಲ್ಲಿ ಶೇ 64.61 ಪದವೀಧರರು ಮತ್ತು ಶೇ 76.16 ಶಿಕ್ಷಕರು ಮತಚಲಾಯಿಸಿದ್ದಾರೆ.

ಶಿಕ್ಷಕರ ಕ್ಷೇತ್ರಕ್ಕೆ 14 ಮತಗಟ್ಟೆಗಳಲ್ಲಿ ಹಾಗೂ ಪದವಿಧರ ಕ್ಷೇತ್ರಕ್ಕೆ 23 ಮತಗಟ್ಟೆಗಳಲ್ಲಿ ಜಿಲ್ಲೆಯಲ್ಲಿ ಚುನಾವಣೆ ನಡೆದಿದೆ. ಪದವಿಧರ ಕ್ಷೇತ್ರದಲ್ಲಿ ಒಟ್ಟು 15494 ಮತದಾರರ ಪೈಕಿ 10011 ಮಂದಿ ಹಾಗೂ ಶಿಕ್ಷಕರ ವಿಭಾಗದಲ್ಲಿ ಒಟ್ಟು 7140 ಮತದಾರರು ಪೈಕಿ 5438 ಮಂದಿ ಮತಚಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News